ಚಿತ್ರದುರ್ಗ:ರಾಜ್ಯದಲ್ಲೇ ಪ್ರಸಿದ್ಧಿ ಗಳಿಸಿರುವ ಹಿಂದೂ ಮಹಾಗಣಪತಿ ನಿಮಜ್ಜನಕ್ಕೆ ಕೋಟೆನಾಡು ಚಿತ್ರದುರ್ಗ ಸಜ್ಜಾಗಿದೆ. ಸೆ.21 ಕ್ಕೆ ಗಣೇಶ ನಿಮಜ್ಜನ ಕಾರ್ಯಕ್ರಮ ಪ್ರಯುಕ್ತ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಇಂದು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಕೋಟೆನಾಡಲ್ಲಿ ಹಿಂದೂ ಮಹಾಗಣಪತಿ ನಿಮಜ್ಜನಕ್ಕೆ ಸಿದ್ಧತೆ: ಯುವಕರಿಂದ ಬೈಕ್ ರ‍್ಯಾಲಿ - latest chitradurga news
ಚಿತ್ರದುರ್ಗದಲ್ಲಿ ಸೆ.21ಕ್ಕೆ ನೆರವೇರಲಿರುವ ಗಣೇಶ ನಿಮಜ್ಜನ ಪ್ರಯುಕ್ತ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಇಂದು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಯುವಕರು ಬೈಕ್ ರ‍್ಯಾಲಿ ನಡೆಸಿದರು.
ಭಜರಂಗದಳ ಹಾಗೂ ವಿಶ್ವಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯನ್ನು ಶಾಸಕ ತಿಪ್ಪಾರೆಡ್ಡಿ ಹಾಗೂ ಬಸವ ಮೂರ್ತಿ ಮಾದರ ಚನ್ನಯ್ಯ ಶ್ರೀ, ಕುಂಚಿಟಿಗ ಮಠದ ಪೀಠಾಧಿಪತಿ ಶಾಂತವೀರ ಸ್ವಾಮೀಜಿ ಜಂಟಿಯಾಗಿ ಉದ್ಘಾಟಿಸಿದರು. ನಗರದ ಕನಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಯುವಕರು ಭಾಗಿಯಾಗಿದ್ದರು. ನಗರದ ಕನಕ ವೃತ್ತದಿಂದ ಆರಂಭವಾದ ಬೈಕ್ ರ‍್ಯಾಲಿ ಸಂಗೋಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತ ತಲುಪಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಇನ್ನು, ಸೆ. 21ರಂದು ನೆರವೇರಲಿರುವ ಗಣೇಶ ನಿಮಜ್ಜನ ಸಲುವಾಗಿ ಇಡೀ ಚಿತ್ರದುರ್ಗ ಕೇಸರಿಮಯವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಸ್ವಾಗತಿಸಲು ಬೃಹತ್ ಫ್ಲೆಕ್ಸ್ಗಳು ರಾರಾಜಿಸುತ್ತಿವೆ.