ಚಿತ್ರದುರ್ಗ: ಸಚಿವ ಸ್ಥಾನ ಸಿಗದಿದ್ದಕ್ಕೆ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬೆಂಬಲಿಗರು ಆಕ್ರೋಶಿತರಾಗಿ ಬೈಕಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಭುಗಿಲೆದ್ದ ಅಸಮಾಧಾನ: ತಿಪ್ಪಾರೆಡ್ಡಿ ಬೆಂಬಲಿಗರಿಂದ ಬೈಕ್ಗೆ ಬೆಂಕಿ, ಕೈಯಲ್ಲಿ ಲಾಠಿ ಹಿಡಿದ ಎಸ್ಪಿ - ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ
ಸಚಿವ ಸ್ಥಾನ ಸಿಗದಿದ್ದಕ್ಕೆ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬೆಂಬಲಿಗರು ಆಕ್ರೋಶಿತರಾಗಿ ಬೈಕಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ತಿಪ್ಪಾರೆಡ್ಡಿ ಬೆಂಬಲಿಗರಿಂದ ಬೈಕಿಗೆ ಬೆಂಕಿ
ನಗರದ ಗಾಂಧಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಎಸ್ಪಿ ಡಾ. ಅರುಣ್ ಲಾಠಿ ಪ್ರಹಾರ ಮಾಡಿದರು. ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರ ಮನವೊಲಿಸಲು ಪೋಲಿಸರು ಮುಂದಾಗಿದ್ದಾರು.
ಆದರೆ ಪೊಲೀಸರ ಮನವೊಲಿಕೆಗೆ ಜಗ್ಗದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಇದಕ್ಕೆ ಅಕ್ರೋಶಗೊಂಡ ಎಸ್ಪಿ ಡಾ. ಅರುಣ್ ಸ್ವತಃ ತಾವೇ ಲಾಠಿ ಹಿಡಿದು ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು. ಇನ್ನು ಕೆಲ ಕಾರ್ಯಕರ್ತರನ್ನು ಬಂಧಿಸಲಾಯಿತು.