ಚಿತ್ರದುರ್ಗ: ಜಿಲ್ಲೆಯ ಉಡುವಳ್ಳಿ ಗ್ರಾಮದಲ್ಲಿ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರೂ ಜನರು ಆತನನ್ನು ರಕ್ಷಿಸುವ ಬದಲು ನೋಡುತ್ತಾ ನಿಂತಿದ್ದ ಅಮಾನವೀಯ ಘಟನೆ ಕಂಡುಬಂದಿದೆ.
ರಸ್ತೆ ಅಪಘಾತದಲ್ಲಿ ಓರ್ವ ಸಾವು: ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೇ ಮಾನವೀಯತೆ ಮರೆತ ಜನ - ಬೈಕ್ ಅಪಘಾತ
ಚಿತ್ರದುರ್ಗ ಜಿಲ್ಲೆ ಉಡುವಳ್ಳಿ ಗ್ರಾಮದಲ್ಲಿ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರೂ ಆತನ ರಕ್ಷಣೆಗೆ ಮುಂದಾಗದೇ ಜನರು ಮಾನವೀಯತೆ ಮರೆತು ನೋಡುತ್ತಾ ನಿಂತಿದ್ದರು.
ಹಿರಿಯೂರಿನ ವಸಂತ ನಗರದ ನಿವಾಸಿ ವೆಂಕಟೇಶ್ (55) ಮೃತಪಟ್ಟಿದ್ದು, ಹಿಂಬದಿ ಸವಾರ ಕರಿಯಪ್ಪ ಎಂಬಾತ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರು. ಈ ವೇಳೆಸ್ಥಳೀಯರುಕರಿಯಪ್ಪನನ್ನು ಆಸ್ಪತ್ರೆಗೆ ಕರೆದೊಯ್ಯದೇ ಮಾನವೀಯತೆ ಮರೆತಿದ್ದಾರೆ.
ಅಪಘಾತ ಸಂಭವಿಸಿ ಒಂದು ಗಂಟೆ ಕಳೆದರೂ ಸ್ಥಳಕ್ಕೆ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಪೊಲೀಸರೇ ಆಟೋದಲ್ಲಿ ಗಾಯಾಳು ಕರಿಯಪ್ಪನನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ಹಿರಿಯೂರು-ಹುಳಿಯಾರು ರಸ್ತೆ ಕಿರಿದಾಗಿರುವ ಹಿನ್ನೆಲೆ ಪದೇ ಪದೇ ಅಪಘಾತgಳು ಸಂಭವಿಸುತ್ತಿವೆ ಎಂಬ ಮಾತುಗಳು ಕೇಳಿಬರ್ತಿವೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.