ಕರ್ನಾಟಕ

karnataka

ETV Bharat / state

ಚಿತ್ರದುರ್ಗದ ವೈದ್ಯೆಯ ಸಾವಿಗೆ ಬಿಗ್​ ಟ್ವಿಸ್ಟ್​.. ಪೋಸ್ಟ್​ ಮಾರ್ಟಮ್​ ರಿಪೋರ್ಟ್​ನಲ್ಲಿ ಸ್ಫೋಟಕ ಮಾಹಿತಿ ಬಯಲು - ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ

ಪೋಸ್ಟ್​ ಮಾರ್ಟಮ್ ವೇಳೆ ತಲೆಗೆ ಗುಂಡು ಹಾರಿಸಿರುವುದು ಗೊತ್ತಾಗಿದೆ. ರೂಪಾ ಅವರು ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಿತ್ರದುರ್ಗ ಎಸ್​ಪಿ ಕೆ ಪರಶುರಾಮ್​ ತಿಳಿಸಿದ್ದಾರೆ.

District Leprosy Control Officer Dr Rupa
ಜಿಲ್ಲಾ ಕೃಷ್ಠರೋಗ ನಿವಾರಣಾಧಿಕಾರಿ ಡಾ ರೂಪಾ

By

Published : Dec 6, 2022, 10:56 AM IST

Updated : Dec 6, 2022, 11:11 AM IST

ಚಿತ್ರದುರ್ಗ:ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಅವರ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಪೋಸ್ಟ್​ ಮಾರ್ಟಮ್​ ವೇಳೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಚಿತ್ರದುರ್ಗ ಎಸ್​ಪಿ ಕೆ ಪರಶುರಾಮ್​ ಮಾಹಿತಿ ನೀಡಿದ್ದಾರೆ.

ರೂಪಾ ಅವರು ವಿ ಪಿ ಎಕ್ಸ್ ಟೆನ್ಷನ್ ಬಡಾವಣೆಯ‌ಲ್ಲಿರುವ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಾಗ ತಲೆಗೆ ಪೆಟ್ಟಾಗಿ, ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅವರ ಪತಿ ಡಾ. ರವಿ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಜಿಲ್ಲಾಸ್ಪತ್ರೆಗೆ ತೆರಳುವ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೋಸ್ಟ್​ ಮಾರ್ಟಮ್ ವೇಳೆ ತಲೆಗೆ ಗುಂಡು ಹಾರಿಸಿರುವುದು ಗೊತ್ತಾಗಿದೆ. ರೂಪಾ ಅವರು ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹಲವು ಅನುಮಾನಗಳಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಉಡುಪಿಯಲ್ಲಿ ಪ್ರಿನ್ಸಿಪಾಲ್​ ನಿಂದಿಸಿದ ಆರೋಪ.. ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

Last Updated : Dec 6, 2022, 11:11 AM IST

ABOUT THE AUTHOR

...view details