ಚಿತ್ರದುರ್ಗ: ಕೋಟೆ ನಾಡಿನ ನಾಲ್ಕು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಭದ್ರಾ ಜಲಾಶಯದಿಂದ ಹಳ್ಳಗಳಿಗೆ ನೀರು ಬಿಡುಗಡೆ ಮಾಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೋಟೆ ನಾಡಿಗೆ ಹರಿದು ಬರ್ತೀದ್ದಾಳೆ ಭದ್ರೆ, ಇತ್ತ ರೈತರ ಸಂಭ್ರಮ - Vv ocean in Chitradurga district
ಚಿತ್ರದುರ್ಗ ಜಿಲ್ಲೆಯ ರೈತರ ಬಹುದಿನದ ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರಲಿದ್ದು, ಅನ್ನದಾತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.
ಕೋಟೆ ನಾಡಿಗೆ ಹರಿದು ಬರ್ತೀದ್ದಾಳೆ ಭದ್ರೆ
ಬರದ ನಾಡಿಗೆ ಭದ್ರೆ ಹರಿದು ಬರುವುದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಿರಿಯೂರು ತಾಲೂಕಿನ ವಿವಿ ಸಾಗರಕ್ಕೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿರುವ ನೀರು ಹರಿದು ಬರಲು ಸಾಕಷ್ಟು ದಿನಗಳ ಬೇಕಾಗಿದೆ.
ನೀರು ಬಿಡುಗಡೆ ಮಾಡಿರುವುದರಿಂದ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ಮುಂಜಾಗ್ರತಾ ಕ್ರಮವಾಗಿ ಡಂಗುರ ಸಾರಲಾಗಿದ್ದು, ಕಾಲುವೆ, ಹಳ್ಳಗಳಿಗೆ ಜನರು ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.