ಕರ್ನಾಟಕ

karnataka

ETV Bharat / state

ಭದ್ರಾ ನೀರು ವಿವಿ ಸಾಗರಕ್ಕೆ ಸೇರುವುದು ಸನಿಹ : ರೈತರ ಮೊಗದಲ್ಲಿ ಮೂಡಿದ ಮಂದಹಾಸ - undefined

ಕೋಟೆನಾಡಿನಲ್ಲಿ ಬರದಿಂದ ಜನರು ಬೇಸತ್ತಿದ್ದು, ಈ ಬಾರಿ ರೈತರಿಗೆ ಅನುಕೂಲವಾಗಲೆಂದು ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಬಿಡುಲು ನಿರ್ಧಾರಿದ್ದಾರೆ ಎನ್ನಲಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ವಾಣಿವಿಲಾಸ ಸಾಗರ

By

Published : Mar 31, 2019, 1:20 PM IST

ಚಿತ್ರದುರ್ಗ:ಬರದಿಂದ ತತ್ತರಿದ್ದ ಕೋಟೆನಾಡಿನ ರೈತರಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ವಾಣಿವಿಲಾಸ ಸಾಗರಕ್ಕೆ ಹರಿದು ಬರುವ ಕಾಲ ಸನ್ನಿಹಿತವಾಗಿದೆ.

ಈಗಾಗಲೇ ಶಾಂತಿಪುರದ ಬಳಿ ಇರುವ ಮೊದಲ ಹಂತದ ಲಿಫ್ಟ್​ನಲ್ಲಿ ಮೋಟರ್ ಪಂಪ್ ಸ್ಥಿತಿ ಹಾಗೂ ಸಾಮರ್ಥ್ಯದ ವಿಚಾರವಾಗಿ ಕಳೆದ ದಿನ ಅಧಿಕಾರಿಗಳು ನಡೆಸಿದ ಪ್ರಾಯೋಗಿಕ ಪರೀಕ್ಷೆ ಕೊನೆಗೂ ಯಶಸ್ವಿಯಾಗಿದೆ. ಶಾಂತಿ ಪುರದ ಬಳಿ ಇರುವ ಐದು ಪಂಪ್​ಗಳ ಪೈಕಿ ಮೊದಲ ಪಂಪ್​ನಲ್ಲಿ ಈಗಾಗಲೇ ನೀರನ್ನು ಎತ್ತಲಾಗಿದೆ.

ವಾಣಿವಿಲಾಸ ಸಾಗರ

ಉಳಿದ ನಾಲ್ಕು ಪಂಪ್​ಗಳನ್ನು ಕ್ರಮೇಣ ಚಾಲನೆಗೆ ಒಳಪಡಿಸಲಾಗಿದೆ. ಇದರಿಂದ ಅನ್ನದಾತರ ಬಹುದಿನಗಳ ಕನಸು ನನಸಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ‌.

For All Latest Updates

TAGGED:

ABOUT THE AUTHOR

...view details