ಕರ್ನಾಟಕ

karnataka

ETV Bharat / state

ಶಾಸಕ , ಜಿಪಂ ಸಿಇಒ ನಡುವೆ ಜಟಾಪಟಿ: ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ - undefined

ಸಿಇಒ ಸತ್ಯಭಾಮ ಪರ ಕಾಡುಗೊಲ್ಲ ಸಮಾಜ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಬ್ಯಾಟಿಂಗ್ ಮಾಡಿರುವ ಚಾಟ್ ವೈರಲ್ ಆಗಿದೆ. ಈ ವಿಚಾರವಾಗಿ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಕೂಡ ನಡೆದಿದೆ. ಈ ಬೆನ್ನಲೇ ಪ್ರತಿಭಟನೆ ಅಗತ್ಯವಿಲ್ಲ ಎಂದು ಸಿಇಒ ಸತ್ಯಭಾಮರವರು ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶಾಸಕ , ಜಿ.ಪಂ ಸಿಇಓ ನಡುವೆ ಜಟಾಪಟಿ

By

Published : May 1, 2019, 5:23 AM IST

ಚಿತ್ರದುರ್ಗ: ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಜಿ.ಪಂ ಸಿಇಒ ನಡುವೆ‌ ನೀರಿಗಾಗಿ ಕಳೆದ ದಿನ ನಡೆದ ಜಟಾಪಟಿ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಸಿಇಒ ಸತ್ಯಭಾಮ ಪರ ಕಾಡುಗೊಲ್ಲ ಸಮಾಜ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಬ್ಯಾಟಿಂಗ್ ಮಾಡಿರುವ ಚಾಟ್ ವೈರಲ್ ಆಗಿದೆ. ಈ ವಿಚಾರವಾಗಿ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಕೂಡ ನಡೆದಿದೆ. ಈ ಬೆನ್ನಲೇ ಪ್ರತಿಭಟನೆ ಅಗತ್ಯವಿಲ್ಲ ಎಂದು ವಾಟ್ಸಪ್ ಗ್ರೂಪ್​ಲ್ಲಿ ಸಿಇಒ ಸತ್ಯಭಾಮರವರು ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಾಟ್ಸಪ್ ಗುಂಪಿನಲ್ಲಿ ಸಮಜಾಯಿಷಿ ನೀಡಿದ ಅವರು ಸರ್ಕಾರಿ ಕೆಲಸದಲ್ಲಿ ಇಂಥ ವ್ಯಕ್ತಿಗಳನ್ನು ನೋಡಿದ್ದೇನೆ, ನಾನು ಐಎಎಸ್ ಕೇಡರ್ ಅಧಿಕಾರಿ. ನಾನು ಸರ್ಕಾರಿ ಸೇವೆಯನ್ನು ನಿಷ್ಠೆಯಿಂದ ಮಾಡುತ್ತೇನೆ, ವೃತ್ತಿ ಜೀವನದಲ್ಲಿ ಇಂಥ ಸವಾಲು ಎದುರಿಸಿದ್ದೇನೆಂದು ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ.

ನಿನ್ನೆ ಜಿ.ಪಂ ಕಚೇರಿಯಲ್ಲಿ ಶಾಸಕ ತಿಪ್ಪಾರೆಡ್ಡಿ ಹಾಗೂ ಸಿಇಒ ಸತ್ಯಭಾರವರ ನಡುವೆ ಜಟಾಪಟಿ ನಡೆದಿತ್ತು. ನೀರು ಪೂರೈಸುವಂತೆ ಸೊಲ್ಲಾಪುರ ಗ್ರಾಮಸ್ಥರು ಜಿಪಂಗೆ ಮುತ್ತಿಗೆ ಹಾಕಿದ ಬೆನ್ನಲ್ಲೇ ಪ್ರತಿಭಟನೆ ವೇಳೆ ಶಾಸಕ ತಿಪ್ಪಾರೆಡ್ಡಿ, ಸಿಇಒ ಸತ್ಯಭಾಮ ನಡುವೆ ವಾಗ್ವಾದ ಕೂಡ ಆಗಿತ್ತು. ಶಾಸಕರು ನೀತಿ ಸಂಹಿತೆ ಇದೆ ಇಲ್ಲದಿದ್ದರೆ ಸಭೆಯಲ್ಲಿ ಚಾರ್ಜ್ ಮಾಡುತ್ತಿದೆ ಎಂದಿದ್ದಕ್ಕೆ, ಏನ್ ಚಾರ್ಜ್ ಮಾಡೋದು, ನನ್ನ ಡ್ಯೂಟಿ ನಾನು ಮಾಡ್ತಿದ್ದೇನೆ ಎಂದು ಏರು ಧ್ವನಿಯಲ್ಲು ಸಿಇಒ ಕೂಡ ಉತ್ತರ ನೀಡಿದ್ದರು.

For All Latest Updates

TAGGED:

ABOUT THE AUTHOR

...view details