ಕರ್ನಾಟಕ

karnataka

ETV Bharat / state

ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳಿಲ್ಲದೆ ನೆಲದ ಮೇಲೆ ಬಾಣಂತಿಯರ ಆರೈಕೆ

ಮಕ್ಕಳ ವಾರ್ಡ್ ಬಳಿ ಸಾರಿ ವಾರ್ಡ್‌ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜನಿಸಿದ ಮಕ್ಕಳಿಗೆ ಉಸಿರಾಟದ ತೊಂದರೆ, ಕೊರೊನಾ ರೋಗಲಕ್ಷಣಗಳು ಇದ್ರೇ ಸಾರಿ ವಾರ್ಡ್​​ಗೆ ವರ್ಗಾಯಿಸಲು ಹತ್ತಿರ ಆಗಿರಲಿ ಎಂದು ವಾರ್ಡ್​​​ ಸ್ಥಾಪಿಸಿರುವುದಾಗಿ ಹೇಳುತ್ತಾರೆ..

Bed problem in Chitradurga district hospital
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ

By

Published : Sep 7, 2020, 9:27 PM IST

Updated : Sep 8, 2020, 4:15 PM IST

ಚಿತ್ರದುರ್ಗ :ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಕೊರತೆ ಎದ್ದು ಕಾಣುತ್ತಿದೆ. ಗರ್ಭಿಣಿಯರನ್ನು ಸಿಬ್ಬಂದಿ ನೆಲದ ಮೇಲೆ ಮಲಗಿಸಿ ಆರೈಕೆ ಮಾಡುತ್ತಿದ್ದಾರೆ. ಸಾರಿ​​ ವಾರ್ಡ್ ಕೂಡ ಮಕ್ಕಳ ವಾರ್ಡ್ ಬಳಿಯೇ ಆರಂಭಿಸಲಾಗಿದ್ದು, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಮೇಲೆ ಪರಿಣಾರಣಾಮ ಬೀರುವ ಸಾಧ್ಯತೆ ಇದೆ.

ಮಕ್ಕಳ ಆಸ್ಪತ್ರೆಯಲ್ಲಿನ ಬೆಡ್​ಗಳು ಸಂಪೂರ್ಣ ಭರ್ತಿಯಾಗಿದ್ದರಿಂದ ಈ ಸಮಸ್ಯೆ ಇದೆ. ಅಲ್ಲದೆ ಅದರ ಬಲ ಭಾಗದಲ್ಲಿಯೇ ಸಾರಿ ವಾರ್ಡ್​​ನ ಆರಂಭಿಸಲಾಗಿದ್ದು, ಜನಿಸಿದ ಮಗುವಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಸೋಂಕು ಹರಡುವ ಭೀತಿ ಉಂಟಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳಿಲ್ಲದೆ ನೆಲದ ಮೇಲೆ ಬಾಣಂತಿಯರ ಆರೈಕೆ

ಹುಟ್ಟಿದ ಕೂಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಆರೈಕೆ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮಗುವಿನ ತಾಯಂದಿರಿಗೆ ತಂಗಲು ಆಸ್ಪತ್ರೆ ಸಿಬ್ಬಂದಿ ಬೆಡ್​​ ನೀಡುತ್ತಿಲ್ಲ. ಅಲ್ಲದೆ ಹೆರಿಗೆಯಾದವರನ್ನು ನಿಗಾದಲ್ಲಿರಿಸದೆ ಮನೆಗೆ ಕಳುಹಿಸುತ್ತಿದ್ದಾರೆ.

ಮಕ್ಕಳ ವಾರ್ಡ್ ಬಳಿ ಸಾರಿ ವಾರ್ಡ್‌ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜನಿಸಿದ ಮಕ್ಕಳಿಗೆ ಉಸಿರಾಟದ ತೊಂದರೆ, ಕೊರೊನಾ ರೋಗಲಕ್ಷಣಗಳು ಇದ್ರೇ ಸಾರಿ ವಾರ್ಡ್​​ಗೆ ವರ್ಗಾಯಿಸಲು ಹತ್ತಿರ ಆಗಿರಲಿ ಎಂದು ವಾರ್ಡ್​​​ ಸ್ಥಾಪಿಸಿರುವುದಾಗಿ ಹೇಳುತ್ತಾರೆ.

ಆರೋಗ್ಯ ಸಚಿವ ಶ್ರೀರಾಮುಲು ಅವರ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಈ ರೀತಿಯಲ್ಲಿವೆ. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಪ್ರಶ್ನೆ ಉದ್ಭವಿಸಿದೆ.

Last Updated : Sep 8, 2020, 4:15 PM IST

ABOUT THE AUTHOR

...view details