ಕರ್ನಾಟಕ

karnataka

ETV Bharat / state

ತಾಯಿಯಿಂದ ಬೇರ್ಪಟ್ಟ ಕರಡಿ ಮರಿ ರಕ್ಷಣೆ: ಆರೈಕೆ ಮಾಡಿ ಕಾಡಿಗೆ ಬಿಟ್ಟ ಬಾಂಡ್ರವಿ ಗ್ರಾಮಸ್ಥರು - chitradurga bear news

ಕೆಳಗೆ ಇಳಿಯಲಾಗದೆ ಮರದಲ್ಲೇ ಪೇಚಾಡುತ್ತಿದ್ದ ಕರಡಿ ಮರಿಯನ್ನು ಗ್ರಾಮಸ್ಥರು ರಕ್ಷಿಸಿ, ಆರೈಕೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ತಾಯಿಯಿಂದ ಬೇರ್ಪಟ್ಟ ಕರತಾಯಿಯಿಂದ ಬೇರ್ಪಟ್ಟ ಕರಡಿ ಮರಿಡಿ ಮರಿ
ತಾಯಿಯಿಂದ ಬೇರ್ಪಟ್ಟ ಕರಡಿ ಮರಿ

By

Published : Aug 24, 2020, 10:23 PM IST

Updated : Aug 24, 2020, 10:56 PM IST

ಚಿತ್ರದುರ್ಗ:ಬಾಂಡ್ರವಿ ಬಳಿಯ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಕರಡಿ ಮರಿ ಪತ್ತೆಯಾಗಿದೆ.

ತಾಯಿಯಿಂದ ಬೇರ್ಪಟ್ಟ ಕರಡಿ ಮರಿ ರಕ್ಷಣೆ

ಕೆಳಗಿಳಿಯಲಾಗದೇ ಮರದಲ್ಲೇ ಪೇಚಾಡುತ್ತಿದ್ದ ಈ ಕರಡಿ ಮರಿಯನ್ನು ಗ್ರಾಮಸ್ಥರು ರಕ್ಷಿಸಿ, ಆರೈಕೆ ಮಾಡಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಬಾಂಡ್ರವಿ ಗ್ರಾಮದಲ್ಲಿ ನಡೆದಿದೆ. ಕರಡಿ ಬಗ್ಗೆ ಮಾಹಿತಿ ತಿಳಿಸಿದರೂ ಸಹ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಅದನ್ನು ರಕ್ಷಿಸಿದ್ದಾರೆ.

ತಾಯಿಯಿಂದ ಬೇರ್ಪಟ್ಟ ಕರಡಿ ಮರಿ

ಕರಡಿ ಮರಿಯನ್ನು ಮರದಿಂದ ಇಳಿಸಿ ಆರೈಕೆ ಮಾಡಿದ ಬಳಿಕ ಗ್ರಾಮಸ್ಥರು ಮರಿಯನ್ನು ಕಾಡಿಗೆ ಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಆದ್ರೆ ಇಷ್ಟೆಲ್ಲ ಆದ್ರೂ ಅರಣ್ಯ ಇಲಾಖೆ ಸಿಬ್ಬಂದಿ ಬಾರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Last Updated : Aug 24, 2020, 10:56 PM IST

ABOUT THE AUTHOR

...view details