ಚಿತ್ರದುರ್ಗ: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
'ಭಜರಂಗಿ-2': ಶಿವಣ್ಣನ ಕಟೌಟ್ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ - Milk anointed to the cutout of Shivanna
'ಭಜರಂಗಿ-2' ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರಸನ್ನ ಥಿಯೇಟರ್ ಅನ್ನು ಅಭಿಮಾನಿಗಳು ಸಿಂಗರಿಸಿ, ಶಿವಣ್ಣನ ಕಟೌಟ್ಗೆ ಪುಷ್ಪಮಾಲೆ, ನಿಂಬೆಹಣ್ಣಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದರು.
ಶಿವಣ್ಣನ ಕಟೌಟ್ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ
'ಭಜರಂಗಿ-2' ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರಸನ್ನ ಥಿಯೇಟರ್ ಅನ್ನು ಅಭಿಮಾನಿಗಳು ಸಿಂಗರಿಸಿ, ಶಿವಣ್ಣನ ಕಟೌಟ್ಗೆ ಪುಷ್ಪಮಾಲೆ, ನಿಂಬೆಹಣ್ಣಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದರು. ಸಿನಿಮಾ ರಿಲೀಸ್ಗೂ ಮುನ್ನ ಕುಂಬಳಕಾಯಿ ಒಡೆದು, ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಳ್ಳಕೆರೆ ನಗರದ ರಾಮಕೃಷ್ಣ ಥಿಯೇಟರ್ನಲ್ಲಿ ಸಹ ಸಿನಿಮಾ ರಿಲೀಸ್ ಆಗಿದ್ದು, 20 ತಿಂಗಳ ನಂತರ ಶಿವಣ್ಣ ಚಿತ್ರ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.