ಚಿತ್ರದುರ್ಗ: ಪ್ರಧಾನಿ ಮೋದಿ ವಿರುದ್ಧ ಪಚೋದನಕಾರಿ ಹೇಳಿಕೆ ಆರೋಪ ಪ್ರಕರಣದಲ್ಲಿ ಗುಜರಾತ್ ಶಾಸಕ, ಪ್ರಬಲ ಎಡಪಂಥೀಯ ನಾಯಕ ಜಿಗ್ನೇಶ್ ಮೇವಾನಿಗೆ ಚಿತ್ರದುರ್ಗದ ಕಿರಿಯ ಸಿವಿಲ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.
ಪ್ರಧಾನಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪ್ರಕರಣ: ಜಿಗ್ನೇಶ್ ಮೇವಾನಿಗೆ ಬಿಗ್ ರಿಲೀಫ್ - ಶಾಸಕ ಜಿಗ್ನೇಶ್ ಮೇವಾನಿಗೆ ಬಿಗ್ ರಿಲೀಫ್
ಮೋದಿ ರ‍್ಯಾಲಿಯಲ್ಲಿ ಕುರ್ಚಿ ಎಸೆಯಿರಿ, ದಂಗೆ ದೊಂಬಿ ಮಾಡಿ ಎಂದು ಹೇಳಿಕೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಸದ್ಯ ರಿಲೀಫ್ ಸಿಕ್ಕಿದೆ. ಚಿತ್ರದುರ್ಗದ ಕಿರಿಯ ಸಿವಿಲ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.

ಕಳೆದ ವರ್ಷ ಎಪ್ರಿಲ್ 6 ರಂದು ಚಿತ್ರದುರ್ಗದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿಯಿಂದ ಒಟ್ಟು 4 ದೂರುಗಳು ಜಿಗ್ನೇಶ್ ವಿರುದ್ಧ ದಾಖಲಾಗಿದ್ದವು. ಇದರಿಂದ ನ್ಯಾಯಾಲಯಕ್ಕೆ ಬಂದು ಹಾಜರಾಗುವಂತೆ ಕೋರ್ಟ್ ನೋಟಿಸ್ ನೀಡಿತ್ತು. ಈ ಹಿನ್ನೆಲೆ ಇಂದು ಕೋರ್ಟ್ಗೆ ಹಾಜರಾಗಿದ್ದ ಶಾಸಕ ಮೇವಾನಿಗೆ ಕಿರಿಯ ಕೋರ್ಟ್ ಜಾಮೀನು ಕರುಣಿಸಿದೆ.
ಮೋದಿ ರ‍್ಯಾಲಿಯಲ್ಲಿ ಕುರ್ಚಿ ಎಸೆಯಿರಿ, ದಂಗೆ ದೊಂಬಿ ಮಾಡಿ ಎಂದು ಹೇಳಿಕೆ ನೀಡಿದ್ದ ಆರೋಪ ಎದುರಿಸುತ್ತಿದ್ದ ಮೇವಾನಿಗೆ ಸದ್ಯ ರಿಲೀಫ್ ಸಿಕ್ಕಿದ್ದು, 25 ಸಾವಿರ ಬಾಂಡ್ ಜೊತೆಗೆ ಒಬ್ಬರನ್ನು ಶೂರಿಟಿ ಪಡೆದು ಕೋರ್ಟ್ ಜಾಮೀನು ನೀಡಿದೆ.