ಕರ್ನಾಟಕ

karnataka

ETV Bharat / state

ಚಿತ್ರದುರ್ಗದ ಎಸ್ಪಿ ಸೈಕಲ್​ ಮೂಲಕ ಸಿಟಿ ರೌಂಡ್ಸ್: ಸಾಮಾಜಿಕ ಅಂತರ ಕಾಪಾಡುವಂತೆ ಎಚ್ಚರಿಕೆ - Cycle Jatha Chitradurga

ಚಿತ್ರದುರ್ಗ ಜಿಲ್ಲೆಯ ಎಸ್ಪಿ.ಜಿ ರಾಧಿಕಾರವರು ಸೈಕಲ್ ಏರಿ ನಗರದಲ್ಲಿ ಸಂಚರಿಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Awareness Program
ಸೈಕಲ್ ಜಾಥಾ ಮೂಲಕ ಕೊರೊನಾ ನಿರ್ಮೂಲನೆ ಬಗ್ಗೆ ಜಾಗೃತಿ

By

Published : May 7, 2020, 3:16 PM IST

ಚಿತ್ರದುರ್ಗ: ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸೈಕಲ್ ಮೂಲಕ ನಗರದಲ್ಲಿ ಸಂಚಾರ ನಡೆಸಿ ಕೊರೊನಾ ಕುರಿತು ಬಗ್ಗೆ ಜನ ಜಾಗೃತಿ ಮೂಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾರವರಿಂದ ಸೈಕಲ್ ಜಾಥಾ ಮೂಲಕ ಕೊರೊನಾ ನಿರ್ಮೂಲನೆ ಬಗ್ಗೆ ಜಾಗೃತಿ

ಸೈಕಲ್ ಏರಿ ನಗರ ಪ್ರದೇಶದಲ್ಲಿ ಸಂಚರಿಸಿದ ಅವರು, ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಕೆಲವೆಡೆ ದಿಢೀರನೆ ಭೇಟಿ ನೀಡಿ ಕೆಲ ವ್ಯಾಪಾರಿಗಳಿಗೆ ಶಾಕ್ ನೀಡಿದರು. ಈ ವೇಳೆ ವ್ಯಾಪಾರಿಗಳಿಗೆ ಅಂತರ ಕಾಪಾಡುವಂತೆ ವಾರ್ನಿಂಗ್ ಮಾಡಿದರು.

ಇನ್ನು ಜನ ಸಾಮಾನ್ಯರಿಗೆ ಲಾಕ್​ಡೌನ್ ನಿಯಮ ಸಡಿಲಿಕೆ ಬಗ್ಗೆ ಪಾಠ ಮಾಡಿದರು. ಇತಂಹ ಕಠಿಣ ಪರಿಸ್ಥಿತಿಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ವ್ಯಾಪಾರಸ್ಥರಿಗೆ ಕ್ಲಾಸ್ ತೆಗೆದುಕೊಂಡರು.

ABOUT THE AUTHOR

...view details