ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಕೋವಿಡ್ ಲಸಿಕೆಗಾಗಿ ಸಕಲ ಸಿದ್ಧತೆ ನಡೆಸಿದ ಆರೋಗ್ಯಾಧಿಕಾರಿಗಳು - ಚಿತ್ರದುರ್ಗ ನಗರದ ಜಿಲ್ಲಾ ಆರೋಗ್ಯ

ಮಹಾಮಾರಿ ಕೊರೊನಾ ತಡೆಗಟ್ಟುವ ಲಸಿಕೆ ತಯಾರಿಸಲು ಈಗಾಗಲೇ ಸರ್ಕಾರ ಚಿಂತನೆ ನಡೆಸಿ ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲೂ ಕೂಡ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಲಸಿಕೆ ತಯಾರಿಕೆ ಬಗ್ಗೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ ಲಸಿಕೆ ಪೂರ್ಣವಾದ ನಂತರ ಚಿತ್ರದುರ್ಗಕ್ಕೂ ಬಂದು ತಲುಪಲಿದೆ.

arrival-of-the-covid-vaccine-all-ready-made-chitradurga-authorities
ಕೋಟೆನಾಡಿಗೆ ಕೋವಿಡ್ ಲಸಿಕೆ ಆಗಮನ

By

Published : Nov 14, 2020, 8:52 PM IST

ಚಿತ್ರದುರ್ಗ: ಜನರು ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದ್ದು, ಕೊರೊನಾ ಲಸಿಕೆ ತಯಾರಿಸಲು ಅದರ ಪ್ರಯೋಗಗಳು ನಡೆಯುತ್ತಿವೆ. ಕೋಟೆನಾಡಿನಲ್ಲಿರುವ ಪ್ರಾದೇಶಿಕ ಲಸಿಕಾ ಕೇಂದ್ರಕ್ಕೆ ಕೋವಿಡ್ ಲಸಿಕೆ ಆಗಮನದ ನಿರೀಕ್ಷೆಯಲ್ಲಿ ಅಧಿಕಾರಿಗಳು ಕಾಯುತ್ತಿದ್ದು, ಜನಸಾಮಾನ್ಯರಲ್ಲಿ ಸಂತಸ ಮನೆ ಮಾಡಿದೆ.

ಕೋಟೆನಾಡಿಗೆ ಕೋವಿಡ್ ಲಸಿಕೆ ಆಗಮನದ ನಿರೀಕ್ಷೆಯಲ್ಲಿ ಅಧಿಕಾರಿಗಳು

ಮಹಾಮಾರಿ ಕೊರೊನಾ ತಡೆಗಟ್ಟುವ ಲಸಿಕೆ ತಯಾರಿಸಲು ಈಗಾಗಲೇ ಸರ್ಕಾರ ಚಿಂತನೆ ನಡೆಸಿ ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲೂ ಕೂಡ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಲಸಿಕೆ ತಯಾರಿಕೆ ಬಗ್ಗೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ ಲಸಿಕೆ ಪೂರ್ಣಗೊಂಡ ಬಳಿಕ ಚಿತ್ರದುರ್ಗಕ್ಕೂ ಬಂದು ತಲುಪಲಿದೆ. ಆದ್ದರಿಂದ ಬೆಂಗಳೂರಿನಿಂದ ಆಗಮಿಸುವ ಲಸಿಕೆಗಾಗಿ ಚಿತ್ರದುರ್ಗ ನಗರದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಇರುವ ಪ್ರಾದೇಶಿಕ ಲಸಿಕಾ ಕೇಂದ್ರಕ್ಕೆ ಬರಮಾಡಿಕೊಳ್ಳಲು ಅಧಿಕಾರಿಗಳು ಕಾಯುತ್ತಿದ್ದಾರೆ.

ಬೆಂಗಳೂರಿನಿಂದ ವ್ಯಾಕ್ಸಿನ್ ಬರುವ‌ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದು, ಇಲ್ಲಿ ಲಸಿಕೆ ಬಂದ ಬಳಿಕ ನೆರೆಯ ದಾವಣಗೆರೆ, ಶಿವಮೊಗ್ಗ, ಬಳ್ಳಾರಿಗೆ ರಫ್ತಾಗುವ ಸಾಧ್ಯತೆ‌ ಇದೆ. ಕೊರೊನಾದಿಂದ ಹೈರಾಣಾಗಿರುವ ಜಿಲ್ಲೆಯ ಜ‌ನತೆಗೆ ಬೆಂಗಳೂರಿನಿಂದ ಜಿಲ್ಲೆಗೆ ಕೋವಿಡ್ ವ್ಯಾಕ್ಸಿನ್ ಬರುವ ನಿರೀಕ್ಷೆ ಸಂತಸ ಮೂಡಿಸಿದೆ‌.

ABOUT THE AUTHOR

...view details