ಕರ್ನಾಟಕ

karnataka

ETV Bharat / state

ಶೋಕಿಗಾಗಿ ಸರಗಳ್ಳತನ : ಚಿತ್ರದುರ್ಗದಲ್ಲಿ ಇಬ್ಬರ ಬಂಧನ

ಪ್ರಕರಣದ ಪ್ರಮುಖ ಆರೋಪಿ ಉಮೇಶ್​ ಪ್ರತಿಷ್ಟಿತ ಕುಟುಂಬದವನಾಗಿದ್ದು, ಓದು ಬರಹ ಬಿಟ್ಟು ತಂದೆ ತಾಯಿ ಮಾತು ಕೇಳದೆ ನಾನಾ ರೀತಿಯ ದುಶ್ಚಟಗಳನ್ನು ಕಲಿತಿದ್ದ. ಪಲ್ಸರ್ ಬೈಕ್​ನಲ್ಲಿ ಸರಗಳ್ಳತನ ಮಾಡುವುದನ್ನು ಆರಂಭಿಸಿದ್ದ. ಕೆಲವೊಮ್ಮೆ ಒಬ್ಬಂಟಿಗನಾಗಿ ಮತ್ತು ಕೆಲವೊಮ್ಮೆ ತನ್ನ ಸ್ನೇಹಿತರಾದ ಉದಯ್ ಕುಮಾರ್ ಮತ್ತು ಕೀರ್ತಿಯೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗುತ್ತಿದ್ದ..

arrest-of-two-robbers-at-chitradurga
ಚಿತ್ರದುರ್ಗದಲ್ಲಿ ಇಬ್ಬರ ಬಂಧನ

By

Published : Jun 20, 2021, 5:10 PM IST

ಚಿತ್ರದುರ್ಗ: ಮೋಜಿಗಾಗಿ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮತ್ತು ಹೊರವಲಯದಲ್ಲಿ ಕೆಲ ದಿನಗಳಿಂದ ಬೈಕ್​ನಲ್ಲಿ ಸಂಚರಿಸುವ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಸರಗಳ್ಳತ ಮಾಡುತ್ತಿದ್ದರು.

ಚಿತ್ರದುರ್ಗದಲ್ಲಿ ಇಬ್ಬರ ಬಂಧನ

ಮುದ್ದಾಪುರದ ಉಮೇಶ್​​ ಹಾಗೂ ಉದಯ್ ಕುಮಾರ್​ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇವರ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳಿಂದ 8,50,000 ರೂ. ಬೆಲೆ ಬಾಳುವ 190 ಗ್ರಾಂ ತೂಕದ 9 ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ 1,50,000 ರೂ. ಬೆಲೆ ಬಾಳುವ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಉಮೇಶ್​ ಪ್ರತಿಷ್ಟಿತ ಕುಟುಂಬದವನಾಗಿದ್ದು, ಓದು ಬರಹ ಬಿಟ್ಟು ತಂದೆ ತಾಯಿ ಮಾತು ಕೇಳದೆ ನಾನಾ ರೀತಿಯ ದುಶ್ಚಟಗಳನ್ನು ಕಲಿತಿದ್ದ. ಪಲ್ಸರ್ ಬೈಕ್​ನಲ್ಲಿ ಸರಗಳ್ಳತನ ಮಾಡುವುದನ್ನು ಆರಂಭಿಸಿದ್ದ. ಕೆಲವೊಮ್ಮೆ ಒಬ್ಬಂಟಿಗನಾಗಿ ಮತ್ತು ಕೆಲವೊಮ್ಮೆ ತನ್ನ ಸ್ನೇಹಿತರಾದ ಉದಯ್ ಕುಮಾರ್ ಮತ್ತು ಕೀರ್ತಿಯೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗುತ್ತಿದ್ದ.

ಇವರ ಜೊತೆಗೆ ಕಳ್ಳತನದ ಮಾಲನ್ನು ಸ್ವೀಕರಿಸಿದ ಆರೋಪದ ಮೇಲೆ ಬಂಗಾರದ ಅಂಗಡಿ ಮಾಲೀಕ ವಿನಯ್ ಮತ್ತು ಮತ್ತೊಬ್ಬ ವ್ಯಕ್ತಿ ಯಶವಂಶ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಓದಿ:ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ 'ಶ್ರೀಮಂತ' !

ABOUT THE AUTHOR

...view details