ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯಾಗಿಸಿರುವ ಕಾಮುಕನನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಮೇಲೆ ಅನ್ವರ್ (25) ನಿರಂತರವಾಗಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೇ ಈ ವಿಚಾರವನ್ನು ಯಾರಿಗಾದರು ತಿಳಿಸಿದ್ರೆ ಆಕೆಯ ಕುಟುಂಬಸ್ಥರನ್ನೆಲ್ಲಾ ಕೊಲೆ ಮಾಡಿ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ.
ಹೀಗಾಗಿ ಆತಂಕಗೊಂಡ ಬಾಲಕಿ ಆತನಿಂದ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿ ಈಗ ಗರ್ಭಿಣಿಯಾಗಿದ್ದಾಳೆ. ಆದರೆ ಗರ್ಭಿಣಿಯಾದ ಬಳಿಕವೂ ಬಲತ್ಕಾರಕ್ಕೆ ಯತ್ನಿಸಿದ್ದಾನೆಂಬ ಆರೋಪವನ್ನು ಬಾಲಕಿಯ ಕುಟುಂಬಸ್ಥರು ಮಾಡಿದ್ದಾರೆ. ಕಳೆದ ಸೋಮವಾರ ರಾತ್ರಿ ಬಾಲಕಿ ಮೇಲೆ ಅತ್ಯಾಚಾರವೆಸಗುತ್ತಿದ್ದ ವೇಳೆ ಬಾಲಕಿಯ ತಂಗಿ ಈ ದೃಶ್ಯವನ್ನು ನೋಡಿದಾಗ ಅಲ್ಲಿಂದ ಆರೋಪಿ ಅನ್ವರ್ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಆರೋಪಿ ಅನ್ವರ್ನನ್ನು ಬಂಧಿಸಿದ್ದಾರೆ.