ಕರ್ನಾಟಕ

karnataka

ETV Bharat / state

ಸಿದ್ದಪ್ಪನ ಬೆಟ್ಟದಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣ: ಕೊಲೆ ಆರೋಪಿಯ ಬಂಧನ - ಅಶೋಕ್​ ಕೊಲೆ

ಹೊಸದುರ್ಗ ತಾಲೂಕಿನ ಸಿದ್ದಪ್ಪನ ಬೆಟ್ಟದಲ್ಲಿ ಎಂ.ಜಿ.ದಿಬ್ಬ ಗ್ರಾಮದ ಆಶೋಕ್ ಎಂಬಾತನನ್ನು ಹತ್ಯೆಗೈಯ್ಯಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ ಚಿತ್ರದುರ್ಗ ಪೊಲೀಸರು, ಆರೋಪಿ ದೇವರಾಜ್​ ಎಂಬುವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Siddappa's hill
ಪೊಲೀಸರು

By

Published : Jul 4, 2020, 7:29 PM IST

ಚಿತ್ರದುರ್ಗ: ಕೋಟೆನಾಡಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಸಿದ್ದಪ್ಪನ ಬೆಟ್ಟದ ಅನಾಥ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎಂ.ಜಿ.ದಿಬ್ಬ ಗ್ರಾಮದ ನಿವಾಸಿಯಾಗಿದ್ದ ಆಶೋಕ್ ಎಂಬಾತನನ್ನು ಹೊಸದುರ್ಗ ತಾಲೂಕಿನ ಎರಡನೇ ಯಾಲಕಪ್ಪನಹಟ್ಟಿಯ ಸಿದ್ದಪ್ಪನ ಬೆಟ್ಟದ ಹತ್ತಿರ ಕುತ್ತಿಗೆಗೆ ಬಿಗಿಯಾಗಿ ಕಟ್ಟಿ, ಉಸಿರುಗಟ್ಟಿಸಿ ಸಾಯಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೊಸದುರ್ಗ ಠಾಣೆ ಪೊಲೀಸರು, ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್​​ಪಿ ರಾಧಿಕಾ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾನಿಂಗ ನಂದಗಾಂವಿ ಮಾರ್ಗದರ್ಶದಲ್ಲಿ ಹಿರಿಯೂರು ಡಿವೈಎಸ್​​ಪಿ ರೋಷನ್ ಜಮೀರ್, ಹೊಸದುರ್ಗ ಸಿಪಿಐ ಹಾಗೂ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಆರಂಭಿಸಲಾಗಿತ್ತು. ಸಂಶಯಾಸ್ಪದ ವ್ಯಕ್ತಿಯಾದ ಹೊಸದುರ್ಗ ತಾಲೂಕಿನ ಎಂ.ಜಿ.ದಿಬ್ಬ ಗ್ರಾಮದ ದೇವರಾಜ್​​ನನ್ನು ಅಜಂಪುರದಲ್ಲಿ ಸೆರೆ ಹಿಡಿಯಲಾಗಿದ್ದು, ಆತನೇ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದ ಆರೋಪಿ ದೇವರಾಜ್​​ನಿಂದ ಕೃತ್ಯಕ್ಕೆ ಬಳಿಸಿದ್ದ ಬೈಕ್​, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆರೋಪಿಯ ವಿಚಾರಣೆ ನಡೆಸಿ ನಂತರ ಕೊಲೆಗೆ ಕಾರಣ ಕಂಡುಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details