ಚಿತ್ರದುರ್ಗ:ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆವೋರ್ವಳು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳ ಆರೋಪ: ಮಹಿಳೆ ನೇಣಿಗೆ ಶರಣು - allegation of dowry
ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಮಹಿಳೆವೋರ್ವಳು ನೇಣಿಗೆ ಶರಣಾಗಿದ್ದಾಳೆ. ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
![ವರದಕ್ಷಿಣೆ ಕಿರುಕುಳ ಆರೋಪ: ಮಹಿಳೆ ನೇಣಿಗೆ ಶರಣು](https://etvbharatimages.akamaized.net/etvbharat/prod-images/768-512-4199398-thumbnail-3x2-megha.jpg)
ಮಹಿಳೆ ನೇಣಿಗೆ ಶರಣು
ಹೆಗ್ಗೆರೆ ಗ್ರಾಮದ ರಂಗಸ್ವಾಮಿ ಎಂಬುವರ ಪತ್ನಿ ಸಿಂಧು (23) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೂರು ವರ್ಷದ ಹಿಂದೆ ರಂಗಸ್ವಾಮಿಯನ್ನು ಹುಲಿಕುಂಟೆ ಗ್ರಾಮದ ಸಿಂಧು ವಿವಾಹವಾಗಿದ್ದರು. ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಮಹಿಳೆ ನೇಣಿಗೆ ಶರಣು
ಘಟನಾ ಸ್ಥಳಕ್ಕಾಗಮಿಸಿದ ಚಳ್ಳಕೆರೆ ಪೊಲೀಸರು ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆಯ ಪತಿ ರಂಗಸ್ವಾಮಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.