ಚಿತ್ರದುರ್ಗ:ಎಲ್ಲ ಶಾಸಕರಿಗೂ ಮಂತ್ರಿಯಾಗುವ ಆಶಾ ಭಾವನೆ ಇರುತ್ತದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
ಹಿರಿಯೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಮಂತ್ರಿಯಾಗಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಎಂಎಲ್‌ಸಿ ಆದವರು ಮಂತ್ರಿಗಳಾಗೋದು ತಪ್ಪಲ್ಲ. ಯಾವ ಶಾಸಕರು ಮಂತ್ರಿಗಳಾಗಬೇಕು ಎಂಬುದನ್ನು ಪಕ್ಷ ನಿರ್ಧಾರ ಮಾಡುತ್ತದೆ. ನಿರ್ಣಯ ಕೈಗೊಂಡ ಬಳಿಕ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಾಜ್ಯಕ್ಕೆ ಸಿಎಂ ಬಿಎಸ್‌ವೈ ಉತ್ತಮ ಆಡಳಿತ ನೀಡಿದ್ದಾರೆ. ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ನನ್ನ ಮಾಹಿತಿ ಪ್ರಕಾರ, ಸಿಎಂ ಬದಲಾಗುವುದಿಲ್ಲ. ಚಿತ್ರದುರ್ಗ ಬರದ ನಾಡು ಎಂದು ಹೆಸರುವಾಸಿಯಾಗಿತ್ತು. ಎಲ್ಲ ಪಕ್ಷಗಳು ನೀರಾವರಿ ವ್ಯವಸ್ಥೆ ಮಾಡ್ತೀವಿ ಎಂದು ಭರವಸೆ ಮಾತ್ರ ನೀಡುತ್ತಿದ್ದರು. ಆದ್ರೆ ಬಿಎಸ್‌ವೈ ಆಡಳಿತದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿ ಜಿಲ್ಲೆಗೆ ನೀರಾವರಿ ಒದಗಿಸಲಾಗಿದೆ ಎಂದು ಶಾಸಕಿ ಪೂರ್ಣಿಮಾ ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದರು.
ಓದಿ:ಜೊತೆಗೆ ಬಂದ 17 ಜನರಲ್ಲಿ ಯಾರನ್ನೂ ಸಿಎಂ ಕೈ ಬಿಡುವುದಿಲ್ಲ: ಸಚಿವ ರಮೇಶ್ ಜಾರಕಿಹೊಳಿ
ಸಿಎಂ ಬದಲಾವಣೆ ವಿಚಾರವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಎಲ್ಲೂ ಹೇಳಿಲ್ಲ. ಇದು ಮಾಧ್ಯಮಗಳು ಮಾಡಿರುವ ಸೃಷ್ಟಿ. ಸಿಎಂ ಯಡಿಯೂರಪ್ಪ ತಮ್ಮ ಪುತ್ರನಿಗೆ ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕಿ ಪೂರ್ಣಿಮಾ, ಸಿಎಂ ಪುತ್ರನಿಗೆ ಸಚಿವ ಸ್ಯಾನ ನೀಡುವುದರಲ್ಲಿ ತಪ್ಪಿಲ್ಲ. ಅವರು ಕೂಡ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಚಿವ ಸ್ಥಾನ ಬೇಕೆಂದು ಸಿಎಂ ಬಳಿ ಹೋಗಿ ಕೇಳಿ, ಅವರಿಗೆ ಮುಜುಗರ ಉಂಟು ಮಾಡುವುದಿಲ್ಲ. ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡಬೇಕಿದೆ. ನಾನು ಹಿಂದೊಮ್ಮೆ ಸಿಎಂ ಕೇಳಿದಾಗ ಇವಾಗ ಸಾಧ್ಯವಿಲ್ಲ, ಮುಂದೆ ನೋಡೋಣ ಎಂದು ಹೇಳಿದ್ದರು. ಎಲ್ಲ ಶಾಸಕರು ಸಿಎಂಗೆ ಸಹಕಾರ ನೀಡಬೇಕು. ಅವರಿಗೂ ಕೆಲವು ಕಷ್ಟಗಳಿರುತ್ತವೆ. ಮುಖ್ಯಮಂತ್ರಿ ನೀಡಿದ ಭರವಸೆಗೆ ಬದ್ಧರಾಗಿರುತ್ತಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ ಹೇಳಿದರು.