ಚಿತ್ರದುರ್ಗ:ಲಾಕ್ಡೌನ್ನಿಂದಾಗಿ ಹಲವು ದಿನಗಳ ಕಾಲ ಬಂದ್ ಆಗಿದ್ದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿ 2 ದಿನ ಕಳೆದು ಮೂರನೇ ದಿನಕ್ಕೆ ಕಾಲಿಟ್ಟರೂ ಜಿಲ್ಲೆಯ ಪ್ರಯಾಣಿಕರು ಮಾತ್ರ ಬಸ್ನಲ್ಲಿ ಪ್ರಯಾಣ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾದ್ರೂ ಬಸ್ ನಿಲ್ದಾಣದತ್ತ ಬಾರದ ಪ್ರಯಾಣಿಕರು - ಚಿತ್ರದುರ್ಗದಲ್ಲಿ ಬಸ್ ನಿಲ್ದಾಣದತ್ತ ಬಾರದ ಜನ
ಲಾಕ್ಡೌನ್ ಸಡಿಲಿಕೆಯಾದರೂ ಬಸ್ ನಿಲ್ದಾಣದತ್ತ ಬರಲು ಪ್ರಯಾಣಿಕರು ಹಿಂದೇಟು ಹಾಕ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂಬುದು ಸ್ಥಳೀಯರ ಮಾತಾಗಿದೆ.

ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ ವಾದ್ರೂ ಬಸ್ ನಿಲ್ದಾಣದತ್ತ ಬಾರದ ಪ್ರಯಾಣಿಕರು
ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಬಸ್ ನಿಲ್ದಾಣ
ಬಸ್ ಸಂಚಾರ ಆಂಭವಾಗಿ ಮೂರು ದಿನಗಳಾದರೂ ಬಸ್ ನಿಲ್ದಾಣದಲ್ಲಿ ಜನರಿಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನಗಳಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಜನಜಂಗುಳಿಯಿಂದ ಕೂಡಿತ್ತಾದರೂ ಇದ್ದಕ್ಕಿದ್ದಂತೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಇಡೀ ಕೇಂದ್ರೀಯ ಬಸ್ ನಿಲ್ದಾಣ ಜನರಿಲ್ಲದೆ ಭಣಗುಡುತ್ತಿದೆ. ಬಸ್ಗಳು ನಿಂತ ಸ್ಥಳದಲ್ಲೇ ನಿಂತಿದ್ದು, ಪ್ರಯಾಣಿಕರು ಮಾತ್ರ ಸುಳಿಯದಂತಾಗಿದೆ. ಇದೇ ರೀತಿ ಮುಂದುವರೆದರೆ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಲಿದೆ.