ಕರ್ನಾಟಕ

karnataka

ETV Bharat / state

ಆದಿ ಕರ್ನಾಟಕ ಮಾದೀಗ ಸಮುದಾಯದಿಂದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿಗೆ ಬೆಂಬಲ - kannada newspaper

ಆದಿ ಕರ್ನಾಟಕ ಮಹಾಸಭಾ ಸಂಘಟನೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಎ. ನಾರಾಯಣ ಸ್ವಾಮಿಯವರಿಗೆ ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡಿದೆ.

ಬಿಜೆಪಿ ಅಭ್ಯರ್ಥಿ

By

Published : Apr 1, 2019, 1:40 PM IST

ಚಿತ್ರದುರ್ಗ: ಲೋಕಸಭಾ ಚುನಾವಣೆ ಜಿಲ್ಲೆಯಲ್ಲಿ ರಂಗೇರತೊಡಗಿದೆ. ಬಿಜೆಪಿ ಅಭ್ಯರ್ಥಿ ಎ. ನಾರಾಯಣ ಸ್ವಾಮಿಯವರಿಗೆ ಒಂದೆಡೆ ಭೋವಿ ಸಮುದಾಯ ಮತ ಹಾಕುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರೆ, ಇತ್ತ ಮಾದೀಗ ಸಮುದಾಯ ಅವರ ಪರವಾಗಿ ನಿಲ್ಲಲು ಮುಂದಾಗಿದೆ.

ಕಳೆದ ದಿನ ನಡೆದ ನಿರ್ಣಾಯಕ ಸಭೆಯಲ್ಲಿ ಯಾವ ಅಭ್ಯರ್ಥಿ ಸದಾಶಿವ ಆಯೋಗದ ವರದಿ ಪರವಾಗಿ ನಿಲ್ಲುತ್ತಾನೋ ಅಂತಹ ವ್ಯಕ್ತಿಗೆ ಭೋವಿ ಸಮುದಾಯದಿಂದ ಬೆಂಬಲಿಸುತ್ತೇವೆ ಎಂಬ ಹೇಳಿಕೆಯನ್ನು ಭೋವಿ ಸಮುದಾಯದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ನೀಡಿದ್ದರು. ಇದರ ಬೆನ್ನಲ್ಲೇ ಇಂತಹ ಮಹತ್ತರವಾದ ಈ ಬೆಳವಣಿಗೆ ಆಗಿದೆ.

ಆದಿ ಕರ್ನಾಟಕ ಮಾದೀಗ ಸಮುದಾಯದಿಂದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿಗೆ ಬೆಂಬಲ

ಸದ್ಯ ಸದಾಶಿವ ಆಯೋಗದ ವಿರುದ್ಧ ಇರುವ ಮಾದಿಗ ಸಮುದಾಯ ಇದೀಗ ಬಿಜೆಪಿ ಅಭ್ಯರ್ಥಿ ಎ. ನಾರಾಯಣ ಸ್ವಾಮಿಯವರಿಗೆ ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡಿದೆ. ಇಂದು ಆದಿ ಕರ್ನಾಟಕ ಮಹಾಸಭಾ ಸಂಘಟನೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಘೋಷಣೆ ಮಾಡಲಾಗಿದ್ದು, ಬಹುತೇಕ ಭೋವಿ ಸಮುದಾಯಕ್ಕೆ ಟಾಂಗ್ ಕೊಟ್ಟಂತಾಗಿದೆ.

ABOUT THE AUTHOR

...view details