ಚಿತ್ರದುರ್ಗ:ನಗರ ಭಜರಂಗಳದಳ ಕಛೇರಿಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಟಿ ಮಾಳವಿಕಾ ಅವಿನಾಶ್ ಅವರು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.
ಜಿಲ್ಲೆಯ ಪ್ರತಿ ಮನೆ-ಮನೆಗೂ ತೆರಳಿ ನಿಧಿ ಸಂಗ್ರಹಿಸಿ ರಾಮ ಮಂದಿರಕ್ಕೆ ಹಣ ಸಂದಾಯ ಮಾಡಲು ನಿಧಿ ಸಂಗ್ರಣಾ ಅಭಿಯಾನಕ್ಕೆ ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆ ಚಾಲನೆ ನೀಡಿದ್ದು, ಸಮಾಜದ ಪ್ರತಿಯೊಬ್ಬರನ್ನು ರಾಮ ಮಂದಿರ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಳವಿಕಾ ಮನೆ ಬಾಗಿಲಿಗೆ ತೆರಳಿ ರಶೀದಿ ನೀಡಿ ನಿಧಿ ಸಂಗ್ರಹಿಸಿದರು.