ಕರ್ನಾಟಕ

karnataka

ETV Bharat / state

ಶ್ರೀರಾಮುಲುಗೆ ತಪ್ಪಿದ ಡಿಸಿಎಂ ಸ್ಥಾನ.. ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರ ಆಕ್ರೋಶ.. - social media

ಚುನಾವಣೆ ಪೂರ್ವದಲ್ಲಿ ಡಿಸಿಎಂ ಹುದ್ದೆ ನೀಡ್ತೀವಿ ಎಂದು ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ಹೈಕಮಾಂಡ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮುಲು ಪರ ಕಾರ್ಯಕರ್ತರು ತಮ್ಮ ಅಸಮಾಧಾನ ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀರಾಮುಲು

By

Published : Aug 27, 2019, 1:46 PM IST

ಚಿತ್ರದುರ್ಗ:ಸದ್ಯ ಸಚಿವರಾಗಿರುವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೈತಪ್ಪಿರೋದಕ್ಕೆ ಅಭಿಮಾನಿಗಳಲ್ಲಿ ಹಾಗೂ ಅವರ ಕ್ಷೇತ್ರದ ಕಾರ್ಯಕರ್ತರಲ್ಲಿ ಬೇಗುದಿ ಆರಂಭವಾಗಿದೆ.

ಚುನಾವಣೆ ಪೂರ್ವದಲ್ಲಿ ಡಿಸಿಎಂ ಹುದ್ದೆ ನೀಡ್ತೀವಿ ಎಂದು ಕೊಟ್ಟ ಮಾತಿಗೆ ತಪ್ಪಿದ ಬಿಜೆಪಿ ಹೈಕಮಾಂಡ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಟ್ಸ್ಆ್ಯಪ್​ ಸ್ಟೇಟಸ್..​

ನಾಯಕ ಸಮುದಾಯದಲ್ಲಿ ಕೂಡ ಡಿಸಿಎಂ ಪಟ್ಟಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕೆಲ ಕಾರ್ಯಕರ್ತರು ಮೊಳಕಾಲ್ಮೂರು ಕ್ಷೇತ್ರದ ಮುಖಂಡರು ಶ್ರೀರಾಮುಲು ಡಿಸಿಎಂ ಆಗಲಿ ಎಂದರೆ, ಇತ್ತ ನಾಯಕ ಸಮುದಾಯದವ್ರು ದೇವದುರ್ಗ ಶಾಸಕ ಶಿವನಗೌಡ ನಾಯಕ ಡಿಸಿಎಂ ಆಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಆರಂಭಿಸಿದ್ದಾರೆ.

ಮೊಳಕಾಲ್ಮೂರು ಬಿಜೆಪಿ ವಾಟ್ಸ್ಆ್ಯಪ್ ಗ್ರೂಪ್‌ನಲ್ಲೇ ಡಿಸಿಎಂ ಪಟ್ಟಕ್ಕೆ ಭಾರಿ ಚರ್ಚೆಯಾಗುತ್ತಿದ್ದು, ಡಿಸಿಎಂ ಪಟ್ಟಕ್ಕೆ ದೇವದುರ್ಗ ಶಾಸಕ ಶಿವನಗೌಡ ನಾಯಕ ಅರ್ಹ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲೂ ಶಿವನಗೌಡರಿಗೆ ಡಿಸಿಎಂ ಸ್ಥಾನ ನೀಡಲು ಅವರ ಅಭಿಮಾನಿಗಳು ಆಗ್ರಹಿದ್ದು, ಶ್ರೀರಾಮುಲು ಅಭಿಮಾನಿಗಳು ಸ್ವಲ್ಪ ದಿನ ಇರಿ, ನಮ್ ಶ್ರೀರಾಮುಲು ಸಾಹೇಬ್ರು ಡಿಸಿಎಂ ಆಗ್ತಾರೆ ಎನ್ನುತ್ತಿದ್ದಾರೆ. ಈ ಚರ್ಚೆ ಇನ್ಯಾವ ಸ್ವರೂಪ ಪಡೆಯುತ್ತೋ ನೋಡಬೇಕು.

ABOUT THE AUTHOR

...view details