ಚಿತ್ರದುರ್ಗ: ಲಾರಿ ಹರಿದ ಪರಿಣಾಮ ಓರ್ವ ಕುರಿಗಾಹಿ ಹಾಗೂ 25 ಕುರಿಗಳು ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ.
ಹುಳಿಯಾರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕುರಿಗಾಹಿ, 25 ಕುರಿಗಳ ದಾರುಣ ಸಾವು - Accident in Huliyaru SH
ಹಿರಿಯೂರು ತಾಲೂಕಿನ ಹುಳಿಯಾರು ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಓರ್ವ ಕುರಿಗಾಹಿ ಹಾಗೂ 25 ಕುರಿಗಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಓರ್ವ ಕುರಿಗಾಹಿ, 25 ಕುರಿಗಳು ದಾರುಣ ಸಾವು
ಹಿರಿಯೂರು ತಾಲೂಕಿನ ಹುಳಿಯಾರು ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕುರಿಗಾಹಿ ರಾಜು (23) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, 25 ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ.
ಸಾವಿಗೀಡಾಗಿರುವ ಕುರಿಗಳು ಚಳ್ಳಕೆರೆ ತಾಲೂಕು ಪರಶುರಾಮಪುರ ಗ್ರಾಮದ ತಿಮ್ಮಣ್ಣ ಎಂಬುವರಿಗೆ ಸೇರಿದ್ದಾಗಿವೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.