ಚಿತ್ರದುರ್ಗ:ರಸ್ತೆಯಲ್ಲಿ ಕ್ಯಾಂಟರ್ ವಾಹನ ನಿಲ್ಲಿಸಿ ಮಲಗಿದ್ದಾಗ ವೇಗವಾಗಿ ಬಂದ ಇನ್ನೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲೂಕಿನ ಮೇಟಿಕುರ್ಕಿ ಗ್ರಾಮದ ಬಳಿ ಸಂಭವಿಸಿದೆ.
ಕ್ಯಾಂಟರ್ ನಿಲ್ಲಿಸಿ ಮಲಗಿದ್ದಾಗ ಲಾರಿ ಡಿಕ್ಕಿ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ - Chitradurga accident News
ಕ್ಯಾಂಟರ್ ವಾಹನ ನಿಲ್ಲಿಸಿ ಮಲಗಿದ್ದವ ವೇಳೆ ವೇಗವಾಗಿ ಬಂದ ಇನ್ನೊಂದು ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲೂಕಿನ ಮೇಟಿಕುರ್ಕಿ ಗ್ರಾಮದ ಬಳಿ ನಡೆದಿದೆ.
ನಿಂತ ಕ್ಯಾಂಟರ್ಗೆ ಲಾರಿ ಡಿಕ್ಕಿ
ಕುಮಾರ(24), ವಿಜಯ್ (28) ಮೃತರು. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿ, ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ಅಜಾಗರೂಕತೆ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಇನ್ನುಳಿದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹಿರಿಯೂರು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jan 17, 2021, 9:35 AM IST