ಕರ್ನಾಟಕ

karnataka

ETV Bharat / state

ಲಾರಿ-ಬೈಕ್ ಡಿಕ್ಕಿ... ವ್ಯಕ್ತಿ ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಗಂಭೀರ - ಓರ್ವ ಬೈಕ್ ಸವಾರ ಮೃತ

ಚಿತ್ರದುರ್ಗದಲ್ಲಿ ಲಾರಿ-ಬೈಕ್ ಮುಖಾಮುಖಿ ಡಿಕ್ಕಿ. ಘಟನೆಯಿಂದ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾನೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಚಳ್ಳಕೆರೆ ತಾಲೂಕಿನ ಚಳ್ಳಕೇರಮ್ಮ ದೇವಸ್ಥಾನದ ಬಳಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವರು

By

Published : Mar 27, 2019, 7:28 PM IST

ಚಿತ್ರದುರ್ಗ:ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತ ಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವರು

ಚಳ್ಳಕೆರೆ ತಾಲೂಕಿನ ಚಳ್ಳಕೇರಮ್ಮ ದೇವಸ್ಥಾನದ ಹಿಂಭಾಗದ ಅಜ್ಜನಗುಡಿ ರಸ್ತೆಯ ಎಸಿ ಗೋಡನ್ ಬಳಿ ಈ ಅವಘಡ ಸಂಭವಿಸಿದೆ.

ಭಾನುಸಿಂಗ್ (30) ಮೃತ ಬೈಕ್ ಸವಾರ. ಇನ್ನೂ ಗಾಯಳುಗಳಾದ ರಾಜಸ್ಥಾನ ಮೂಲದ ಭೂಮಸಿಂಗ್, ವೀರಸಿಂಗ್ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details