ಚಿತ್ರದುರ್ಗ: ಅಪಘಾತವಾಗಿ ಸ್ಥಳದಲ್ಲೇ ಆಟೋ ಚಾಲಕ ಬಿದ್ದು ನರಳಾಡುತ್ತಿದ್ರೂ ಸಹ ಆಸ್ಪತ್ರೆಗೆ ಸಾಗಿಸದೇ ಜನರು ನಿಂತು ನೋಡುತ್ತಾ ಅಮಾನವೀಯತೆ ಮೆರೆದಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಬಳಿ ನಡೆದಿದೆ.
ಅಪಘಾತವಾಗಿ ವ್ಯಕ್ತಿ ನರಳಾಟ: ಆಸ್ಪತ್ರೆಗೆ ಸೇರಿಸದೆ ವಿಡಿಯೋ ಮಾಡಿ ಜನರ ಅಮಾನವೀಯತೆ - Accident at Chitradurga
ಅಪಘಾತ ನಡೆದು ತೀವ್ರ ರಕ್ತಸ್ರಾವವಾಗಿ ನರಳುತ್ತಿದ್ದರೂ ಸಹ ಗಾಯಾಳುವನ್ನು ಲೆಕ್ಕಿಸದ ಜನರು ಆತನನ್ನು ಆಸ್ಪತ್ರೆಗೆ ಸೇರಿಸದೆ ಅಮಾನವೀಯತೆ ಮೆರೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜನರ ಅಮಾನವೀಯತೆ
ಬೊಮ್ಮದೇವರಹಳ್ಳಿಯ ಮಾರೇಶ್ (31) ಮೃತ ಟಂಟಂ ಆಟೋ ಚಾಲಕ. ಈತ ತೀವ್ರ ರಕ್ತಸ್ರಾವವಾಗಿ ನರಳುತ್ತಿದ್ದ ವೇಳೆ ಜನ ಆತನನ್ನು ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ ಮಾಡಿಕೊಳ್ಳುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಾನ್ಸ್ಟೇಬಲ್ ಕೂಡಾ ನಿರ್ಲಕ್ಷ್ಯವಹಿಸಿ ಆ್ಯಂಬುಲೆನ್ಸ್ಗಾಗಿ ಕಾದು ನಿಂತಿದ್ದ ದೃಶ್ಯ ಸೆರೆಯಾಗಿದೆ.