ಚಿತ್ರದುರ್ಗ: ಕೆಎಎಸ್ ಅಧಿಕಾರಿ ಹಾಗೂ ಗದಗ ನಗರಾಭಿವೃದ್ಧಿ ಕೋಶದ ನಿರ್ದೇಶಕ ಕೆ.ಎನ್.ರುದ್ರೇಶ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಎಎಸ್ ಅಧಿಕಾರಿ ಕೆ.ಎನ್.ರುದ್ರೇಶ್ ಮನೆ ಮೇಲೆ ಎಸಿಬಿ ದಾಳಿ - ಎಸಿಬಿ ದಾಳಿ
ಗದಗ ಎಸಿಬಿ ಮತ್ತು ಡಿವೈಎಸ್ಪಿ ವಾಸುದೇವ ನೇತೃತ್ವದ ತಂಡ ಗದಗ ನಗರಾಭಿವೃದ್ಧಿ ಕೋಶದ ನಿರ್ದೇಶಕ ಕೆ.ಎನ್.ರುದ್ರೇಶ್ ಮನೆ ಮೇಲೆ ದಾಳಿ ನಡೆಸಿದೆ.

Acb ride
ಗದಗ ಎಸಿಬಿ ಮತ್ತು ಡಿವೈಎಸ್ಪಿ ವಾಸುದೇವ ನೇತೃತ್ವದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮಾಡಲಾಗುತ್ತಿದೆ. ಚಿಕ್ಕಜಾಜೂರಿನಲ್ಲಿರುವ ಮನೆ, ಫಾರಂ ಹೌಸ್ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿರುವ ಕೆ.ಎನ್.ರುದ್ರೇಶ್ ಅವರಿಗೆ ಸೇರಿದ ಮನೆ ಮೇಲೆ ಸಹ ದಾಳಿ ನಡೆಸಿ, ಪರಿಶೀಲನೆ ಮುಂದುವರೆಸಲಾಗಿದೆ. ಜೊತೆಗೆ ಗದಗ ನಗರದ ಮನೆ, ಕಚೇರಿ ಮೇಲೂ ದಾಳಿ ನಡೆಸಲಾಗಿದ್ದು, ಏನೆಲ್ಲಾ ವಶಕ್ಕೆ ಪಡೆದಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.