ಚಿತ್ರದುರ್ಗ: ಬಾವಿಯಲ್ಲಿ ಈಜಲು ಇಳಿದ ಯುವಕ ಮುಳುಗಿ ಸಾವನ್ನಪ್ಪಿರುವ ಘಟನೆ ವಡ್ಡನಹಳ್ಳಿ ಸಮೀಪದಲ್ಲಿ ನಡೆದಿದೆ.
ಈಜಲು ಬಾವಿಗಿಳಿದ ಯುವಕ ಮುಳುಗಿ ಸಾವು - Chiitradurga news
ಜಿಲ್ಲೆಯ ಹಿರಿಯೂರು ತಾಲೂಕಿನ ವಡ್ಡನಹಳ್ಳಿಯಲ್ಲಿರುವ ಬಾವಿಗೆ ಈಜಲು ಹೋದ ಈತ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ರಾಘವೇಂದ್ರ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಯಾಗಿದ್ದ ಎಂದು ತಿಳಿದುಬಂದಿದೆ.
ಈಜಲು ಬಾವಿಗಿಳಿದ ಯುವಕ ಮುಳುಗಿ ಸಾವು
ರಾಘವೇಂದ್ರ(22) ಮೃತ ಯುವಕ. ಜಿಲ್ಲೆಯ ಹಿರಿಯೂರು ತಾಲೂಕಿನ ವಡ್ಡನಹಳ್ಳಿಯಲ್ಲಿರುವ ಬಾವಿಗೆ ಈಜಲು ಹೋದ ಈತ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ರಾಘವೇಂದ್ರ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಯಾಗಿದ್ದು, ಹಿರಿಯೂರು ತಾಲೂಕಿನ ಕೆ ಆರ್ ಹಳ್ಳಿಯಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.