ಚಿತ್ರದುರ್ಗ:ಒಬ್ಬ ಮಹಿಳೆ ನೂರು ಶಿಕ್ಷಕರಿಗೆ ಸಮಾನಳು ಎಂದು ಡಾ, ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಒಬ್ಬ ಮಹಿಳೆ ನೂರು ಶಿಕ್ಷಕರಿಗೆ ಸಮ: ಮುರುಘಾ ಶ್ರೀ
ಒಂದು ಮಗುವಿಗೆ ಹುಟ್ಟಿನಿಂದ ಬೆಳೆದು ದೊಡ್ಡವವರಾಗುವವರೆಗೂ ಸಾಕಷ್ಟು ತಿಳಿವಳಿಕೆ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವವಳೇ ಮಹಿಳೆ ಎಂದು ಡಾ, ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಇಂದು ನಗರದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಮಗುವಿಗೆ ಹುಟ್ಟಿನಿಂದ ಬೆಳೆದು ದೊಡ್ಡವವರಾಗುವವರೆಗೂ ಸಾಕಷ್ಟು ತಿಳಿವಳಿಕೆಯನ್ನು ನೀಡುತ್ತಾ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವವಳೇ ಮಹಿಳೆ ಎಂದಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಉದ್ಯೋಗ ಮಾಡುವ ಮಹಿಳೆಯರು ಸಾಕಷ್ಟು ದೌರ್ಜನ್ಯಗಳನ್ನು ಅನುವಭವಿಸುತ್ತಿದ್ದಾರೆ. ಮಹಿಳೆ ಮನೆಯಲ್ಲಿಯಾದರೂ ನೆಮ್ಮದಿಯಿಂದ ಇದ್ದಾರಾ... ಅಲ್ಲೂ ಸಹ ದೈಹಿಕವಾಗಿ ದೌರ್ಜನ್ಯಕ್ಕೊಳಗಾಗಿದ್ದಾರೆ. ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಇದು ನಿಲ್ಲಬೇಕು ಇದಕ್ಕಾಗಿ ಎಲ್ಲರೂ ಕೂಡ ಮಹಿಳೆಯರು ನಮ್ಮಂತೆ ಸಮಾನಳು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.