ಚಿತ್ರದುರ್ಗ: ಹೊರ ರಾಜ್ಯದಿಂದ ಆಗಮಿಸಿದ ಯೋಧನೊಬ್ಬ ಗ್ರಾಮಸ್ಥರಿಗೆ ತೊಂದರೆ ನೀಡದೇ ಜಮೀನಿನಲ್ಲಿ ಸ್ವಯಂ ಆಗಿ ಕ್ವಾರಂಟೈನ್ಗೆ ಒಳಗಾಗಿ ಇತರರಿಗೂ ಮಾದರಿಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.
ಗ್ರಾಮಸ್ಥರ ಸುರಕ್ಷತೆ ಹಿನ್ನೆಲೆ: ಜಮೀನಿನಲ್ಲಿ ಸ್ವಯಂ ಕ್ವಾರಂಟೈನ್ ಆದ ಯೋಧ - Chitradurgha yodha self quarantine news
ಜುಲೈ 5 ರಂದು ಉತ್ತರ ಪ್ರದೇಶದಿಂದ ರಜೆ ಮೇಲೆ ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಯೋಧನೊಬ್ಬ ಜಮೀನಿನಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
Yodha
ಖಂಡೇನಹಳ್ಳಿ ಗ್ರಾಮದ ಯೋಧ ಯೋಗಿಶ್ ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ವಾರ ಜುಲೈ 5 ರಂದು ಉತ್ತರ ಪ್ರದೇಶದಿಂದ ರಜೆ ಮೇಲೆ ಊರಿಗೆ ಆಗಮಿಸಿದ್ದಾರೆ. ಹೊರ ರಾಜ್ಯದಿಂದ ಆಗಮಿಸಿದ ಹಿನ್ನೆಲೆ ಗ್ರಾಮಸ್ಥರಿಗೆ ತೊಂದರೆ ನೀಡಬಾರದು ಎಂದು ನಿರ್ಧರಿಸಿದ ಯೋಧ ಯೋಗೇಶ್, ತಮ್ಮ ಜಮೀನಿನಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಇನ್ನು ಮಾಹಿತಿ ತಿಳಿದ ತಾಲೂಕಿನ ವೈದ್ಯರು ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.