ಕರ್ನಾಟಕ

karnataka

ETV Bharat / state

ರಾಮೇಶ್ವರಂ ಬೀಚ್​​​ನಲ್ಲಿ ಮುಳುಗಿ ಚಿತ್ರದುರ್ಗದ ವಿದ್ಯಾರ್ಥಿ ಸಾವು: ಪೋಷಕರ ಆಕ್ರಂದನ-VEDIO - student died in tamilunadu beach

ಬೀಚ್ ನಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದಿದೆ.

beach
ಬೀಚ್​​​ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

By

Published : Dec 30, 2019, 4:20 PM IST

Updated : Dec 30, 2019, 6:56 PM IST

ಚಿತ್ರದುರ್ಗ: ಬೀಚ್​​​ನಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದಿದೆ.

ಮೃತನನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಎಸ್.ನಿಜಲಿಂಗಪ್ಪ ಪಿಯು ಕಾಲೇಜಿನ ಪ್ರಜ್ವಲ್ (19) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಹೊಸದುರ್ಗ ತಾಲೂಕಿನ ಆದ್ರಿಕಟ್ಟೆ ಗ್ರಾಮದ ರವಿ, ಸುಮ ದಂಪತಿ ಪುತ್ರ ಪ್ರಜ್ವಲ್ ಕಾಲೇಜಿನಿಂದ ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬೀಚ್​​​ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಸ್ನೇಹಿತರ ಜೊತೆ ಬೀಚ್​​ಗೆ ಇಳಿದಿದ್ದ ಪ್ರಜ್ವಲ್ ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಈ ಭಾನುವಾರ ಅವಘಡ ನಡೆದಿದೆ. ಘಟನೆ ನಡೆದು ಒಂದು ದಿನ ಕಳೆದರೂ ಇನ್ನೂ ಮೃತ ದೇಹ ಸಿಗದ ಬೆನ್ನಲ್ಲೇ ತಮಿಳುನಾಡು ಪೊಲೀಸರು ಮತ್ತು ಈಜು ತಜ್ಞರಿಂದ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಇನ್ನೂ ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದ್ದು, ಇದ್ದ ಒಬ್ಬನೇ ಮಗನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Last Updated : Dec 30, 2019, 6:56 PM IST

For All Latest Updates

ABOUT THE AUTHOR

...view details