ಕರ್ನಾಟಕ

karnataka

ಕೆಎಸ್ಆರ್​​ಟಿಸಿ ಬಸ್ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕ

By

Published : Sep 10, 2020, 1:12 PM IST

ಚಿತ್ರದುರ್ಗ ಸೇರಿದಂತೆ ದಾವಣಗೆರೆ ವಿಭಾಗಗಳಿಗೆ ಸೇರಿದ ಬಸ್ಸುಗಳು ಸಿರಿಗೆರೆ ಕ್ರಾಸ್‌ ಬಳಿ ನಿಲ್ಲಿಸುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಟ್ವಿಟರ್​​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ksrtc
Ksrtc

ಚಿತ್ರದುರ್ಗ: ತಾಲೂಕಿನ ಸಿರೆಗೆರೆ ಕ್ರಾಸ್ ಬಳಿ ವೇಗದೂತ ಕೆಎಸ್ಆರ್​​ಟಿಸಿ ಬಸ್​​​ಗಳನ್ನು ನಿಲ್ಲಿಸದೆ ಇರುವುದರಿಂದ ಪ್ರಯಾಣಿಕರೊಬ್ಬರು ಟ್ವಿಟರ್​​​ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕ ಸುದರ್ಶನ್ ಎಂಬುವರು ಟ್ವಿಟರ್ ಮೂಲಕ ವಿಭಾಗಧಿಕಾರಿಗಳಿಗೆ ದೂರು ನೀಡಿದ್ದು, ಚಿತ್ರದುರ್ಗ ಸೇರಿದಂತೆ ದಾವಣಗೆರೆ ವಿಭಾಗಗಳಿಗೆ ಸೇರಿದ ಬಸ್ಸುಗಳು ಸಿರಿಗೆರೆ ಕ್ರಾಸ್‌ ಬಳಿ ನಿಲ್ಲಿಸಿ ಹೋಗಬೇಕು. ಆದ್ರೆ ನಿಲ್ಲಿಸುತ್ತಿಲ್ಲ. ಹೀಗಾಗಿ ಖಾಸಗಿ ವಾಹನಗಳ ಆಶ್ರಯದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.

ದೂರಿಗೆ ಪ್ರತಿಕ್ರಿಯಿಸಿದ ಕೆಎಸ್ಆರ್​​ಟಿಸಿ ಸಂಸ್ಥೆ, ಪ್ರಯಾಣಿಕರಿಗೆ ಸಹಕಾರಿಯಾಗಲೆಂದು ದಾವಣಗೆರೆ ಹಾಗೂ ಚಿತ್ರದುರ್ಗ ಮಾರ್ಗದಲ್ಲಿ ಬಸ್ ಬಿಡಲಾಗಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದೆ. ಇನ್ನು ಸಂಸ್ಥೆಯ ನೂತನ ಅಧ್ಯಕ್ಷ, ಹೊಳಲ್ಕೆರೆ ಕ್ಷೇತ್ರದ ಶಾಸಕ ಚಂದ್ರಪ್ಪ ಕೂಡ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details