ಕರ್ನಾಟಕ

karnataka

ETV Bharat / state

ಮಂಗಳೂರು ಬಾಂಬ್​ ಪ್ರಕರಣ ವಿರೋಧ ಪಕ್ಷದವರ ಕೈವಾಡ : ಸಂಸದ ನಾರಾಯಣಸ್ವಾಮಿ - ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಎ ನಾರಾಯಣಸ್ವಾಮಿ ಪ್ರತಿಕ್ರಿಯೆ

ಮಂಗಳೂರು ಬಾಂಬ್​ ಪ್ರಕರಣದಲ್ಲಿ ವಿರೋಧ ಪಕ್ಷದವರ ಕೈವಾಡವಿದೆ ಎಂದು ಸಂಸದ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

a-narayanaswamy-statement-on-mangalore-bomb-found
ಸಂಸದ ನಾರಾಯಣಸ್ವಾಮಿ

By

Published : Jan 23, 2020, 3:21 PM IST

ಚಿತ್ರದುರ್ಗ:ಮಂಗಳೂರು ಬಾಂಬ್​ ಪ್ರಕರಣದಲ್ಲಿ ವಿರೋಧ ಪಕ್ಷದವರ ಕೈವಾಡವಿದೆ ಎಂದು ಸಂಸದ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ವಿರೋಧ ಪಕ್ಷದವರೇ ಈ ಕೃತ್ಯ ಮಾಡಿಸಿರಬಹುದು, ಅಲ್ಲದೆ ಎನ್ಆರ್​ಸಿ ಹಾಗೂ ಸಿಎಎ ಜಾರಿಯಾದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಾಕಿಸ್ತಾನದ ಏಜೆಂಟ್ಗಳಂತೆ ನಡೆದುಕೊಳ್ಳುತ್ತಿವೆ ಎಂದು ಸಂಸದ ಎ. ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮಂಗಳೂರು ಏರ್ಪೋರ್ಟ್ ಬಾಂಬ್ ಪ್ರಕರಣ ಅಣಕು ಪ್ರದರ್ಶನ ಎಂದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿ ಇಂತಹ ಹೇಳಿಕೆ ನೀಡಿರೋದು ನೋವಿನ ಸಂಗತಿ, ಅವರ ಹೇಳಿಕೆ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ರೀತಿ ಇದೆ. ಕರ್ನಾಟಕ ಪೊಲೀಸರು ಪ್ರಬುದ್ಧರು, ಬಾಂಬರ್ ಆದಿತ್ಯ ರಾವ್ ವಿರುದ್ಧ ತನಿಖೆ ನಡೆಯುತ್ತಿದ್ದು, ಆರೋಪಿ ಮಾನಸಿಕ ಅಸ್ವಸ್ಥ ಅನ್ನೋದು ಇನ್ನೂ ದೃಢವಾಗಿಲ್ಲ, ಈ ಕುರಿತು ಮೆಡಿಕಲ್ ವರದಿ ಬಂದಿಲ್ಲ, ವರದಿ ಬಂದ ಬಳಿಕ ಫೈನಲ್ ಆಗತ್ತೆ ಎಂದರು.

ಮಂಗಳೂರು ಬಾಂಬ್​ ಪ್ರಕರಣದ ಕುರಿತು ಸಂಸದ ಎ. ನಾರಾಯಣಸ್ವಾಮಿ ಹೇಳಿಕೆ

ಆದಿತ್ಯ ರಾವ್ ಗೂ - ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಸಾರ್ವಜನಿಕ ಜೀವನದಲ್ಲಿ ಯಾರು ಯಾರ ಜೊತೆಯಲ್ಲಿ ಬೇಕಾದರೂ ಫೋಟೋ ತೆಗೆಸಿಕೊಳ್ಳಬಹುದು ಎಂದು ಪಕ್ಷಕ್ಕೂ ಆರೋಪಿಗೂ ನಂಟಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

For All Latest Updates

TAGGED:

ABOUT THE AUTHOR

...view details