ಕರ್ನಾಟಕ

karnataka

ETV Bharat / state

ಕುರಿಗಾಹಿ ಕೈಹಿಡಿದ ಎಂಎ ವಿದ್ಯಾರ್ಥಿನಿ: ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಭೂಪ! - A Man marriage with his girlfriend like cinema style

ವಿವಾಹ ಅಂದ್ರೆ ಸ್ನೇಹಿತರು ಬಂಧು-ಬಳಗ, ಕಲ್ಯಾಣ ಮಂಟಪ ಜೊತೆಗೆ ಎಲ್ಲರ ಮೊಗದಲ್ಲೂ ಸಂಭ್ರಮ ಕಳೆಗಟ್ಟಿರುತ್ತೆ. ಆದ್ರೆ ಇಲ್ಲೊಂದು ಜೋಡಿಗೆ ಪ್ರಕೃತಿಯೇ ಚಪ್ಪರ, ಕುರಿಗಳ ಹಿಂಡೇ ಬಂಧು-ಬಳಗ, ಇತರೆ ಕುರಿಗಾಹಿಗಳು ಕಲ್ಯಾಣಕ್ಕೆ ಸಾಕ್ಷಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ವಿಶಿಷ್ಟ ಪ್ರಸಂಗ ನಡೆದಿದ್ದು, ಪ್ರೇಯಸಿ ತನ್ನೆಡೆಗೆ ಓಡಿ ಬರುತ್ತಿದ್ದಂತೆ ಕೈಯಲ್ಲಿ ತಾಳಿ ಹಿಡಿದು ನಿಂತಿದ್ದ ಪ್ರಿಯತಮ ಆಕೆಗೆ ತಾಳಿಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ

By

Published : Nov 10, 2019, 1:13 PM IST

Updated : Nov 10, 2019, 7:58 PM IST

ಚಿತ್ರದುರ್ಗ: ಕುರಿಗಾಹಿ ಯುವಕನೋರ್ವ ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿ ಗ್ರಾಮದಲ್ಲಿ ಜರುಗಿದೆ.

ಸೀಗೆಹಟ್ಟಿ ಗ್ರಾಮದ ಅರುಣ್ ಮತ್ತು ಅಮೃತಾ ಪ್ರೇಮ ವಿವಾಹವಾದ ಜೋಡಿ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಮದುವೆಗೆ ಮನೆಯಲ್ಲಿ ವಿರೋಧವಿತ್ತು. ಇಷ್ಟಾದರೂ ಈ ಜೋಡಿ ಕೊನೆಗೂ ಒಂದಾಗಿದೆ ಎಂದು ತಿಳಿದುಬಂದಿದೆ.

ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಗೆ ತಾಳಿ ಕಟ್ಟಿದ ಕುರಿಗಾಹಿ

ಇನ್ನು, ಪ್ರೇಯಸಿ ತನ್ನೆಡೆಗೆ ಓಡಿ ಬರುತ್ತಿದ್ದಂತೆ ಕೈಯಲ್ಲಿ ತಾಳಿ ಹಿಡಿದು ನಿಂತಿದ್ದ ಯುವಕ ಆಕೆಗೆ ತಾಳಿಕಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಯುವತಿ ತುಮಕೂರು ವಿವಿಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾಳೆ. ಅರುಣ್ ಮತ್ತು ಅಮೃತಾ ಒಂದೇ ಗ್ರಾಮದವರಾಗಿದ್ದು, ಪ್ರೇಮ ವಿವಾಹದ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಗಲಾಟೆ ಕೂಡ ನಡೆದಿತ್ತು ಎಂದು ಹೇಳಲಾಗ್ತಿದೆ.

Last Updated : Nov 10, 2019, 7:58 PM IST

For All Latest Updates

ABOUT THE AUTHOR

...view details