ಚಿತ್ರದುರ್ಗ: ಭುಜ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಧಾರುಣವಾಗಿ ತನ್ನ ಜೀವವನ್ನು ಅಂತ್ಯ ಮಾಡಿಕೊಂಡಿದ್ದಾನೆ. ಬೈಕ್ ಹಾಗೂ ತನ್ನ ಸೊಂಟಕ್ಕೆ ಪಂಚೆ ಕಟ್ಟಿಕೊಂಡು ಬೈಕ್ ಸಮೇತ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ಭುಜ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಬೈಕ್ ಸಮೇತ ನದಿಗೆ ಹಾರಿ ಆತ್ಯಹತ್ಯೆ - chitradurga latest news
ಈತ ಊರೂರಿಗೆ ತೆರಳಿ ಮಿಕ್ಸಿ ರಿಪೇರಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ..
![ಭುಜ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಬೈಕ್ ಸಮೇತ ನದಿಗೆ ಹಾರಿ ಆತ್ಯಹತ್ಯೆ A man committed suicide in chitradurga](https://etvbharatimages.akamaized.net/etvbharat/prod-images/768-512-13534888-thumbnail-3x2-nin.jpg)
ಭುಜ ನೊವಿನಿಂದ ಬಳಲುತ್ತಿದ್ದ ವ್ಯಕ್ತಿ ನದಿಗೆ ಹಾರಿ ಆತ್ಯಹತ್ಯೆ
ವೇದವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳೂರು ಬಳಿ ಜರುಗಿದೆ. ಚಳ್ಳಕೆರೆ ನಗರದ ಚಿತ್ತಯ್ಯನಹಟ್ಟಿಯ ವಾಸಿ ರಾಮಕೃಷ್ಣ (45) ಮೃತ ವ್ಯಕ್ತಿ.
ಈತನಿಗೆ ಒಮ್ಮೆ ಅಪಾಘಾತದಲ್ಲಿ ಪೆಟ್ಟುಬಿದ್ದು ಮೊಳೆ ನೋವಾಗಿತ್ತು. ಇದರ ನೋವಲ್ಲೇ ಈತ ದಿನ ದೂಡುತ್ತಿದ್ದ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನ ಬೋಯಪೇಟ್ ನಗರದವನಾಗಿದ್ದು, ಚಳ್ಳಕೆರೆ ನಗರದಲ್ಲಿ ವಾಸವಾಗಿದ್ದ. ಮೃತ ವ್ಯಕ್ತಿ ಊರೂರಿಗೆ ತೆರಳಿ ಮಿಕ್ಸಿ ರಿಪೇರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪರಶುರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.