ಚಿತ್ರದುರ್ಗ: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ ಯುವಕನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ದರ್ಶನ್ (21)ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಪ್ರಕರಣ ಸಂಬಂಧ ಸುಳ್ಳು ಸುದ್ದಿ ಹಬ್ಬಿಸಿದ್ದ. ಅತ್ಯಾಚಾರ ಆರೋಪಿಗೆ 10 ಸಾವಿರ ದಂಡ ಹಾಗೂ 2 ತಿಂಗಳು ಜೈಲು ಶಿಕ್ಷೆ ವಿಧಿಸಿ ಕಳಿಸಿದ್ದಾರೆ. ಹಾಗಾದ್ರೆ 10 ಸಾವಿರ ಇದ್ದವರು ಏನು ಬೇಕಾದರೂ ಮಾಡಬಹುದಾ ಎಂದು ಚಿತ್ರದುರ್ಗ ಇನ್ಸ್ಟಾಗ್ರಾಂ ಟ್ರೋಲ್ ಪೇಜ್ನಲ್ಲಿ ಯುವಕ ಪೋಸ್ಟ್ ಮಾಡಿದ್ದ.