ಚಿತ್ರದುರ್ಗ: ಹಸುವೊಂದು ಮೂರು ಹೆಣ್ಣು ಕರು ಹಾಕಿರುವ ಅಚ್ಚರಿಯ ಘಟನೆಗೆ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ಸಾಕ್ಷಿಯಾಗಿದೆ.
ಮೂರು ಹೆಣ್ಣು ಕರುಗಳಿಗೆ ಜನ್ಮ ಕೊಟ್ಟ ಕಾಮಧೇನು - ಮಲ್ಲಪ್ಪನಹಳ್ಳಿ ಗ್ರಾಮ
ಮಲ್ಲಪ್ಪನಹಳ್ಳಿ ಗ್ರಾಮದ ಮೂರ್ಕಣಪ್ಪ ಎನ್ನುವವರಿಗೆ ಸೇರಿದ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.
ಹೆಣ್ಣು ಕರುಗಳು
ಮಲ್ಲಪ್ಪನಹಳ್ಳಿ ಗ್ರಾಮದ ಮೂರ್ಕಣಪ್ಪ ಎನ್ನುವವರಿಗೆ ಸೇರಿದ ಹಸು ಇದಾಗಿದೆ. ಮೂರು ಕರುಗಳು ಒಂದೇ ದಿನ 5 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿರುವುದು ವಿಶೇಷವಾಗಿದ್ದು, ಮೂರು ಕರುಗಳನ್ನು ಕಂಡು ಜನರಲ್ಲಿ ಅಚ್ಚರಿ ಮೂಡಿದೆ.
ಆರೋಗ್ಯವಾಗಿರುವ ಹಸು ಮತ್ತು ಕರುಗಳ ವೀಕ್ಷಣೆಗಾಗಿ ಗ್ರಾಮಸ್ಥರು ಧಾವಿಸುತ್ತಿದ್ದಾರೆ.