ಕರ್ನಾಟಕ

karnataka

ETV Bharat / state

ಶಾಸಕ ತಿಪ್ಪಾರೆಡ್ಡಿ, ಪರಿಸರ ಪ್ರೇಮಿ ನಡುವಿನ ಫೋನ್ ಸಂಭಾಷಣೆ ಆಡಿಯೋ ವೈರಲ್: ಏನಿದೆ ಗೊತ್ತಾ ಇದರಲ್ಲಿ? - ಶಾಸಕ ತಿಪ್ಪಾರೆಡ್ಡಿ ಆಡಿಯೋ ವೈರಲ್

ಚಿತ್ರದುರ್ಗ ನಗರದ ರಂಗಯ್ಯ ಬಾಗಿಲಿನಲ್ಲಿದ್ದ ಪುರಾತನ ಮರಗಳನ್ನು ಕಡಿದು ಹಾಕಲಾಗಿದ್ದು, ಈ ಹಿನ್ನೆಲೆ ಪರಿಸರ ಪ್ರೇಮಿಯೊಬ್ಬ ಶಾಸಕ ತಿಪ್ಪಾರೆಡ್ಡಿಗೆ ಫೊನ್​ ಕರೆ ಮೂಲಕ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ಇದೀಗ ಎಲ್ಲೆಡೆ ವೈರಲ್​ ಆಗತೊಡಗಿದೆ.

File Photo
ಸಂಗ್ರಹ ಚಿತ್ರ

By

Published : Feb 24, 2021, 3:12 PM IST

ಚಿತ್ರದುರ್ಗ: ಮರಗಳಿಗೆ ಕೊಡಲಿ ಏಟು ಹಾಕುತ್ತಿರುವ ವಿಚಾರವಾಗಿ ಚಿತ್ರದುರ್ಗ ಶಾಸಕ ಹಾಗೂ ಪರಿಸರ ಪ್ರೇಮಿಯೊಬ್ಬನ ನಡುವೆ ನಡೆದಿರುವ ದೂರವಾಣಿ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್​ ಆಡಿಯೋ

ಅಭಿವೃದ್ಧಿ ಕಾಮಗಾರಿಗಾಗಿ ನಗರದ ರಂಗಯ್ಯ ಬಾಗಿಲಿನಲ್ಲಿದ್ದ ನೂರಾರು ವರ್ಷಗಳ ಪುರಾತನ ಮರಗಳನ್ನು ಕಡಿದು ಹಾಕಲಾಗುತ್ತಿದೆ ಎಂದು ಆರೋಪಿಸಿ ಶಾಲಾ ಮಕ್ಕಳು ಹಾಗೂ ಪರಿಸರ ಪೇಮಿಗಳು ಈ ಹಿಂದೆ ವಾರವಿಡೀ ಹೋರಾಟ ನಡೆಸಿದ್ದರು. ಇಷ್ಟಾದರೂ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಜಿಲ್ಲಾಡಳಿತ ಆಲದ ಮರಗಳನ್ನ ಕಡಿದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ ಸಾಕಷ್ಟು ಚರ್ಚೆಗಳು ಕೂಡ ವ್ಯಕ್ತವಾಗಿದ್ದು, ಆಲದ ಮರ ಮುಂದೆಯೇ ನಿಂತು ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದ್ದರು.

ವಿದ್ಯಾರ್ಥಿಗಳಿಂದ ಪ್ರತಿಭಟನೆ

ಇದಾದ ಬಳಿಕ ಪರಿಸರ ಪ್ರೇಮಿಯೊಬ್ಬರು ಶಾಸಕ ತಿಪ್ಪಾರೆಡ್ಡಿಗೆ ಪೋನ್ ಮಾಡಿ, ಆಲದ ಮರ ಕಡಿದು ಗುಡಿಸಿ ಗುಂಡಾಂತರ ಮಾಡಿದ್ರಾ? ಎಂದು ತರಾಟೆಗೆ ತಗೆದುಕೊಂಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ, ಏ ಇಡೋ ಪೋನು, ಏ ಇಡೋ ಪೋನು ಎಂದು ಏಕವಚನದಲ್ಲಿ ಶಾಸಕ ತಿಪ್ಪಾರೆಡ್ಡಿ ಹೇಳಿದ್ದಾರೆ. ಈ ಆಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗತೊಡಗಿದ್ದು, ಇತಿಹಾಸ ಪ್ರಸಿದ್ಧ ಮರಗಳ ಮಾರಣ ಹೋಮಕ್ಕೆ ಚಿತ್ರದುರ್ಗ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details