ಕರ್ನಾಟಕ

karnataka

ETV Bharat / state

ರಕ್ಷಣಾ ಕವಚವಿಲ್ಲದೆ ಮಹಿಳೆಯನ್ನು ಮ್ಯಾನ್​ಹೋಲ್​ಗೆ ಇಳಿಸಿದ್ರು: ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ - Chitradurga

ಮಹಿಳೆಗೆ ಯಾವುದೇ ರಕ್ಷಣಾ ಕವಚ ನೀಡದೆ ಕಂಟ್ರ್ಯಾಕ್ಟರ್​​ವೋರ್ವ ಮ್ಯಾನ್​ಹೋಲ್​ಗೆ ಇಳಿಸಿ ಸ್ವಚ್ಛಗೊಳಿಸುವಂತೆ ಹೇಳಿರುವ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಮ್ಯಾನ್​ಹೋಲ್​ನಲ್ಲಿ ಮಹಿಳೆ

By

Published : Sep 8, 2019, 10:17 AM IST

ಚಿತ್ರದುರ್ಗ: ಕಾಂಟ್ರ್ಯಾಕ್ಟರ್ ಓರ್ವ ಮಹಿಳೆಗೆ ಯಾವುದೇ ರೀತಿಯ ರಕ್ಷಣಾ ಕವಚ ನೀಡದೆ ಮ್ಯಾನ್​ಹೋಲ್​ಗೆ ಇಳಿಸಿದ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಜೈನ್ ದೇವಾಲಯ ಮುಂಭಾಗದ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನ ಮ್ಯಾನ್ ಹೋಲ್​ಗೆ ಇಳಿಸಿ ಸ್ವಚ್ಛಗೊಳಿಸುವಂತೆ ಕಾಂಟ್ರಾಕ್ಟರ್ ಹೇಳಿರುವುದನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ಮಹಿಳೆಗೆ ಯಾವುದೇ ರಕ್ಷಣಾ ಕವಚ ನೀಡದೆ ಮ್ಯಾನ್​ಹೋಲ್​ಗೆ ಇಳಿಸಿದ ಕಾಂಟ್ರಾಕ್ಟರ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಚಿತ್ರದುರ್ಗ ನಗರಸಭೆ ಎಚ್ಚೆತ್ತುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ವರ್ಷ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು.

ABOUT THE AUTHOR

...view details