ಚಿತ್ರದುರ್ಗ:ಕೋಟೆನಾಡು ಚಿತ್ರದುರ್ಗದ ಸರಸ್ವತಿಪುರಂ ಬಡಾವಣೆಯಲ್ಲಿ ಗೂಳಿಯೊಂದು ಅಲ್ಲಿನ ಜನರ ನೆಮ್ಮದಿ ಕಸಿದಿದೆ. ದಾರಿಹೋಕರ ಮೇಲೆ ಏಕಾಏಕಿ ದಾಳಿ ಮಾಡುವ ಮೂಲಕ ಹಲವರನ್ನು ಗಾಯಗೊಳಿಸಿದ ಘಟನೆಗಳು ನಡೆದಿವೆ.
ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡುತ್ತಿರುವ ಗೂಳಿಯಿಂದಾಗಿ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಗೂಳಿಯನ್ನು ಹಿಡಿದು ಕಟ್ಟಿಹಾಕಿಲ್ಲ. ಇದರಿಂದ ಜನರ ಮೇಲೆ ಗೂಳಿ ದಿನವೂ ದಾಳಿ ಮಾಡುತ್ತಿದ್ದು, ಜನರು ಪ್ರಾಣ ಭಯದಲ್ಲಿ ಓಡಾಡಬೇಕಿದೆ.