ಕರ್ನಾಟಕ

karnataka

ETV Bharat / state

ಚಿರತೆ ದಾಳಿಗೆ 7 ಕುರಿಗಳು ಬಲಿ.. - ಚಿತ್ರದುರ್ಗದಲ್ಲಿ ಚಿರತೆ ದಾಳಿಗೆ ಕುರಿ ಸಾವು

ಚಿರತೆ ಹಾವಳಿಯಿಂದ ಮಹಿಳೆಯರು, ಮಕ್ಕಳು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ..

chitradurga
ಏಳು ಕುರಿಗಳು ಸಾವು

By

Published : Jan 4, 2021, 12:09 PM IST

ಚಿತ್ರದುರ್ಗ :ಚಿರತೆ ದಾಳಿ ನಡೆಸಿದ ಪರಿಣಾಮ 7 ಕುರಿಗಳು ಸಾವನ್ನಪ್ಪಿದ ಘಟನೆ ಹೊಸದುರ್ಗ ತಾಲೂಕಿನ ಹಾರೋಗೊಂಡನಹಳ್ಳಿಯಲ್ಲಿ ನಡೆದಿದೆ. ಮಂಜುನಾಥ ಎಂಬುವರಿಗೆ ಸೇರಿದ ಕುರಿಗಳು ಕೊಟ್ಟಿಗೆಯಲ್ಲಿದ್ದ ವೇಳೆ ಬೆಳಗಿನ ಜಾವ ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿದೆ.

ಇದರಿಂದ 7 ಕುರಿಗಳು ಸಾವನ್ನಪ್ಪಿವೆ. ಹಾರೋಗೊಂಡನಹಳ್ಳಿ ಗ್ರಾಮದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಇತ್ತ ಗ್ರಾಮದಲ್ಲಿ ಚಿರತೆ ಹಾವಳಿಯಿಂದ ಮಹಿಳೆಯರು, ಮಕ್ಕಳು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details