ಚಿತ್ರದುರ್ಗ: ಜಿಲ್ಲೆಯಲ್ಲಿ 71 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1,914ಕ್ಕೆ ಏರಿಕೆಯಾಗಿದೆ. ಸೋಂಕಿಗೆ ತುತ್ತಾಗಿ 6 ಮಂದಿ ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲೂಕಿನಲ್ಲಿ 14, ಹಿರಿಯೂರು 15, ಹೊಸದುರ್ಗ 07, ಚಳ್ಳಕೆರೆ 20, ಮೊಳಕಾಲ್ಮುರು 06 ಹಾಗು ಹೊಳಲ್ಕೆರೆ 09 ಸೋಂಕು ಪ್ರಕರಣಗಳು ಸೇರಿದಂತೆ ಒಟ್ಟು 71 ಕೊರೊನಾ ಪ್ರಕರಣಗಳು ಇಂದು ದೃಢಪಟ್ಟಿದೆ.