ಚಿತ್ರದುರ್ಗ: ಐದು ಮನೆಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ದೋಚಿ ಖದೀಮರು ಪರಾರಿಯಾದ ಘಟನೆ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ನಡೆದಿದೆ.
ಒಂದೇ ಗ್ರಾಮದ 5 ಮನೆ ಕಳ್ಳತನ: ಅಪಾರ ಪ್ರಮಾಣದ ಚಿನ್ನಾಭರಣ, ನಗದು ಕಳವು - ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮ
ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ 5 ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ಶಾಕುಂತಲ, ಲಕ್ಷ್ಮೀದೇವಿ, ಪುಷ್ಪಮ್ಮ, ಶಿವಲಿಂಗಣ್ಣ ಹಾಗೂ ಚಂದ್ರಣ್ಣ ಎಂಬುವರ ಮನೆಗಳಲ್ಲಿ ಕಳ್ಳತನವಾಗಿದೆ.
ಒಂದೇ ಗ್ರಾಮದ 5 ಮನೆಗಳ ಕಳ್ಳತನ: ಅಪಾರ ಪ್ರಮಾಣದ ಚಿನ್ನಾಭರಣ, ನಗದು ಕಳವು
ತಡರಾತ್ರಿ ಕೈಚಳಕ ತೋರಿದ ಖದೀಮರು ಒಂದೇ ಗ್ರಾಮದ 5 ಮನೆಗಳಲ್ಲಿ ಕೃತ್ಯ ಎಸಗಿದ್ದಾರೆ. ಮಸ್ಕಲ್ ಗ್ರಾಮದ ಶಾಕುಂತಲ, ಲಕ್ಷ್ಮೀದೇವಿ, ಪುಷ್ಪಮ್ಮ, ಶಿವಲಿಂಗಣ್ಣ ಹಾಗೂ ಚಂದ್ರಣ್ಣ ಎಂಬುವರ ಮನೆಗಳಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಸೇರಿದಂತೆ ಹಣ ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡು ಬಂದರೆ ಮಾಹಿತಿ ನೀಡಲು ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ.