ಚಿತ್ರದುರ್ಗ:ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರು ಉರುಳಿ ಬಿದ್ದು ಐದು ಕಾರುಗಳು ಹಾನಿಗೊಳಗಾಗಿವೆ.
ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಮರ, ಕಾರುಗಳು ಜಖಂ - cars damaged by tree
ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಗಾಳಿ ಸಹಿತ ಸುರಿದ ಜಡಿಮಳೆಗೆ ಮರ ಧರಾಶಾಹಿಯಾದ ಪರಿಣಾಮ ರಸ್ತೆ ಬದಿ ನಿಲ್ಲಿಸಲಾಗಿದ್ದ 5 ಕಾರುಗಳು ಜಖಂಗೊಂಡಿವೆ.
ಐದು ಕಾರುಗಳು ಜಖಂ
ಜೆಸಿಆರ್ ಬಡಾವಣೆಯಲ್ಲಿ ಮರ ಉರುಳಿಬಿದ್ದಿದ್ದು, ಮರದ ಕೆಳ ಭಾಗದಲ್ಲಿ ಪಾರ್ಕ್ ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಬಡಾವಣೆಯ ಚೌಡೇಶ್ವರಿ ದೇಗುಲದ ಆವರಣದಲ್ಲಿದ್ದ ಮರ ಕಳೆದ ದಿನಗಳಿಂದ ಸುರಿದ ವರ್ಷಧಾರೆಗೆ ಸಮತೋಲನ ಕಳೆದುಕೊಂಡಿದೆ.