ಚಿತ್ರದುರ್ಗ: ಜಿಲ್ಲೆಯಲ್ಲಿಂದು 44 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
ಚಿತ್ರದುರ್ಗದಲ್ಲಿಂದು 44 ಜನರಿಗೆ ಕೊರೊನಾ: ಸೋಂಕಿತರ ಸಂಖ್ಯೆ 12,466 ಕ್ಕೆ ಏರಿಕೆ - chitradurga latest news
ಚಿತ್ರದುರ್ಗದಲ್ಲಿ ಇಂದು 44 ಜನರಿಗೆ ಕೊರೊನಾ ವಕ್ಕರಿಸಿದೆ. ಈ ಹಿನ್ನೆಲೆ ಒಟ್ಟಾರೆ 12 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಆವರಿಸಿದಂತಾಗಿದೆ.
![ಚಿತ್ರದುರ್ಗದಲ್ಲಿಂದು 44 ಜನರಿಗೆ ಕೊರೊನಾ: ಸೋಂಕಿತರ ಸಂಖ್ಯೆ 12,466 ಕ್ಕೆ ಏರಿಕೆ 44 people infected corona in Chitradurga](https://etvbharatimages.akamaized.net/etvbharat/prod-images/768-512-9406293-375-9406293-1604329992930.jpg)
44 ಜನರಿಗೆ ಕೊರೊನಾ ತಗುಲಿರುವುದು ಖಾತ್ರಿಯಾಗಿದ್ದು,ಸೋಂಕಿತರ ಸಂಖ್ಯೆ 12,466 ಕ್ಕೆ ಏರಿಕೆಯಾಗಿದೆ. ಕೋವಿಡ್ 19 ಆಸ್ಪತ್ರೆ ಸೇರಿದ್ದಂತೆ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಿಂದ ಇಂದು74 ಜನ ಇಂದು ಬಿಡುಗಡೆಯಾಗಿದ್ದಾರೆ. 1508 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ವರದಿಯಲ್ಲಿ 44 ಜನರಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ.
ಈಗಾಗಲೇ ಕೊರೊನಾದಿಂದ 60 ಜನ ಕೊನೆಯುಸಿರೆಳೆದರೆ, ಒಬ್ಬರು ಮಾತ್ರ ಇತರೆ ಕಾರಣದಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,466 ಕ್ಕೆ ಏರಿಕೆಯಾಗಿದೆ. 11,904 ಜನ ಸೋಂಕಿನಿಂದ ಗುಣಮುಖರಾದರೆ, ಇನ್ನುಳಿದ 502 ಜನ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.