ಚಿತ್ರದುರ್ಗ: ಜಿಲ್ಲೆಯಲ್ಲಿ ಒಟ್ಟು 43 ಸೋಂಕಿತರು ಇದ್ದರು. ಇದೀಗ ಇವರೆಲ್ಲಾ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆ ಕೊರೊನಾ ಮುಕ್ತವಾಗಿ ಹೊರಹೊಮ್ಮಿದೆ.
ಕೊರೊನಾ ಮುಕ್ತವಾದ ಕೋಟೆನಾಡು: 43 ಜನ ಸೋಂಕಿತರು ಗುಣಮುಖ - Chitradurga
ಚಿತ್ರದುರ್ಗ ಜಿಲ್ಲೆಯಲ್ಲಿದ್ದ 43 ಜನ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಕೋಟೆನಾಡು ಕೊರೊನಾ ಮುಕ್ತ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
![ಕೊರೊನಾ ಮುಕ್ತವಾದ ಕೋಟೆನಾಡು: 43 ಜನ ಸೋಂಕಿತರು ಗುಣಮುಖ ಚಿತ್ರದುರ್ಗ ಜಿಲ್ಲಾಸ್ಪತ್ರೆ](https://etvbharatimages.akamaized.net/etvbharat/prod-images/768-512-7687051-532-7687051-1592573910392.jpg)
ಚಿತ್ರದುರ್ಗ ಜಿಲ್ಲಾಸ್ಪತ್ರೆ
ಕೊರೊನಾ ಮುಕ್ತವಾದ ಕೋಟೆನಾಡು
ತಬ್ಲೀಘಿಗಳು ಸೇರಿದ್ದಂತೆ ಹೊರರಾಜ್ಯಗಳಿಂದ ಆಗಮಿಸಿದವರಿಂದ 43 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಈ 43 ಜನರೂ ಗುಣಮುಖರಾಗಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ ತಳಮಟ್ಟದಿಂದಲೂ ಕೊರೊನಾ ವಾರಿಯರ್ಸ್ ಕಾರ್ಯನಿರ್ವಹಿಸಿದ ಪರಿಶ್ರಮದಿಂದಾಗಿ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 43 ಪ್ರಕರಣಗಳಿದ್ದು, ಅಷ್ಟೂ ಜನ ಗುಣಮುಖರಾಗುವ ಮೂಲಕ ನಮ್ಮ ಜಿಲ್ಲೆ ಕೊರೊನಾ ಮುಕ್ತವಾಗಿದೆ ಎಂದು ಡಿಹೆಚ್ಓ ಡಾ. ಪಾಲಾಕ್ಷ ತಿಳಿಸಿದರು.
Last Updated : Jun 19, 2020, 8:42 PM IST