ಕರ್ನಾಟಕ

karnataka

ETV Bharat / state

ಲಂಚಾ ಪಡೆದು ಸರಕು ಲಾರಿ ಬಿಟ್ಟು ಕಳುಹಿಸಿದ ಆರೋಪ: ನಾಲ್ವರು ಪೊಲೀಸರು ಅಮಾನತು - police suspended

ಲಂಚ ಪಡೆದು ಅಧಿಕ ಅದಿರು ತುಂಬಿದ್ದ ಲಾರಿ ಸಾಗಣೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ತುರುವನೂರಿನ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಚಿತ್ರದುರ್ಗದ ಪೊಲೀಸ್​​​​ ವರಿಷ್ಠಾಧಿಕಾರಿ ಜಿ.ರಾಧಿಕಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

4 Police suspended in Chitradurga for take bribe from lorry driver
ಲಂಚಾ ಪಡೆದು ಸರಕು ಲಾರಿ ಬಿಟ್ಟುಕಳುಹಿಸಿದ ಆರೋಪ: ನಾಲ್ವರು ಪೋಲಿಸರು ಅಮಾನತು

By

Published : May 1, 2020, 9:47 PM IST

ಚಿತ್ರದುರ್ಗ:ಲಂಚ ಪಡೆದು ಸರಕು ಲಾರಿ ಬಿಟ್ಟು ಕಳುಹಿಸಿರುವ ಆರೋಪದಡಿ ಜಿಲ್ಲೆಯ ತುರುವನೂರು ಪೊಲೀಸ್​ ಠಾಣೆಯ ಪಿಎಸ್ಐ, ಎಎಸ್ಐ ಸೇರಿದಂತೆ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅಮಾನತು ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿರುವ ತುರುವನೂರು ಪೊಲೀಸ್ ಠಾಣೆಯ ಪಿಎಸ್​ಐ ಯಶೋದಮ್ಮ,‌ ಎಎಸ್ಐ ಸುದರ್ಶನ, ಚಾಲಕ ನಾಗರಾಜ, ಪೇದೆ ಮಂಜುನಾಥ ಅಮಾನತಾಗಿದ್ದು, ಅಕ್ರಮ ಅದಿರು ಲಾರಿ ಸಾಗಣೆಗೆ ಅವಕಾಶ ನೀಡಿದ ಆರೋಪ ಕೇಳಿ ಬಂದಿದೆ.

ಲಂಚ ಪಡೆದು ಅಧಿಕ ಅದಿರು ತುಂಬಿದ್ದ ಲಾರಿ ಸಾಗಣೆಗೆ ಅವಕಾಶ ಹಿನ್ನೆಲೆ‌ ಅಮಾನತು ಮಾಡಲಾಗಿದೆ ಎಂದು ಪೊಲೀಸ್​​​​​ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದರು‌‌.

ABOUT THE AUTHOR

...view details