ಚಿತ್ರದುರ್ಗ: ಜಿಲ್ಲೆಯಲ್ಲಿಂದು 33 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 800ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗದಲ್ಲಿಂದು 33 ಕೊರೊನಾ ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 800ಕ್ಕೆ ಏರಿಕೆ - Chitradurga corona news
ಚಿತ್ರದುರ್ಗದಲ್ಲಿಂದು 33 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 315 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
![ಚಿತ್ರದುರ್ಗದಲ್ಲಿಂದು 33 ಕೊರೊನಾ ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 800ಕ್ಕೆ ಏರಿಕೆ ಜಿಲ್ಲಾಸ್ಪತ್ರೆ](https://etvbharatimages.akamaized.net/etvbharat/prod-images/768-512-8282952-850-8282952-1596471165864.jpg)
ಜಿಲ್ಲಾಸ್ಪತ್ರೆ
ಚಿತ್ರದುರ್ಗ ತಾಲೂಕಿನಲ್ಲಿ 05, ಹೊಳಲ್ಕೆರೆ 02, ಹಿರಿಯೂರು ತಾಲೂಕಿನಲ್ಲಿ 05, ಮೊಳಕಾಲ್ಮೂರು12, ಚಳ್ಳಕೆರೆ 09 ಒಟ್ಟು 33 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ.
315 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನುಳಿದ 469 ಜನ ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 16 ಜನ ಕೊನೆಯುಸಿರೆಳೆದಿದ್ದಾರೆ.