ಕರ್ನಾಟಕ

karnataka

ETV Bharat / state

ಮುಂಜಾಗ್ರತಾ ಕ್ರಮವಾಗಿ ಬಿ.ದುರ್ಗದಲ್ಲಿ 30 ಹಾಸಿಗೆಯುಳ್ಳ ಕೊರೊನಾ ಆಸ್ಪತ್ರೆ ಸಜ್ಜು..

ಹೊಳಲ್ಕೆರೆ ತಾಲೂಕಿನಲ್ಲಿ ಕಣಿವೆ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಎರಡು ಕಡೆ 21 ಹಾಸಿಗೆ ಮತ್ತು ಚನ್ನಗಿರಿ ರಸ್ತೆಯಲ್ಲಿರುವ ಎಸ್​ಟಿ ಹಾಸ್ಟೆಲ್​ನಲ್ಲಿ ಹತ್ತು ಹಾಸಿಗೆಯುಳ್ಳ ಕೋವಿಡ್-19 ಕೇರ್​ ಸೆಂಟರ್​ಗಳನ್ನ ತೆರೆಯಲಾಗಿದೆ.

30 bed's corona hospital open in chitradurga
ಕೊರೊನಾ ಭೀತಿ: ಮುಂಜಾಗ್ರತಾ ಕ್ರಮವಾಗಿ ಬಿ.ದುರ್ಗದಲ್ಲಿ 30 ಹಾಸಿಗೆಯುಳ್ಳ ಆಸ್ಪತ್ರೆ ಸಜ್ಜು

By

Published : May 13, 2020, 9:13 AM IST

ಚಿತ್ರದುರ್ಗ :ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹೊಳಲ್ಕೆರೆ ತಾಲೂಕಿನ ಬಿ.ದುರ್ಗದಲ್ಲಿ 30 ಹಾಸಿಗೆಯ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಾಲಾಕ್ಷ ತಿಳಿಸಿದ್ದಾರೆ.

ಕಟ್ಟಡ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬಿ.ದುರ್ಗದಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಕಟ್ಟಡ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಹಾಗೂ ಅಗತ್ಯ ಔಷಧೋಪಚಾರದ ಸೌಲಭ್ಯ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರ ಸಜ್ಜುಗೊಳಿಸಲಾಗಿದೆ. ಅಲ್ಲದೆ ಹೊಳಲ್ಕೆರೆ ತಾಲೂಕಿನಲ್ಲಿ ಕಣಿವೆ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಎರಡು ಕಡೆ 21 ಹಾಸಿಗೆ ಮತ್ತು ಚನ್ನಗಿರಿ ರಸ್ತೆಯಲ್ಲಿರುವ ಎಸ್​ಟಿ ಹಾಸ್ಟೆಲ್​ನಲ್ಲಿ ಹತ್ತು ಹಾಸಿಗೆಯುಳ್ಳ ಕೋವಿಡ್-19 ಕೇರ್​ ಸೆಂಟರ್​ಗಳನ್ನ ತೆರೆದಿದ್ದೇವೆ.

ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕಾರಣ, ಸಮೀಪದ ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಯುಳ್ಳ ಕೊವೀಡ್-19 ಆಸ್ಪತ್ರೆ ತೆರೆಯಲಾಗಿದೆ. ಶಿವಮೊಗ್ಗ ರಸ್ತೆಯಲ್ಲಿನ ಬಾಲಕರ ಮೆಟ್ರಿಕ್ ಪೂರ್ವ ಹಾಸ್ಟೆಲ್‍ನಲ್ಲಿ ಫೆಸಿಲಿಟಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.

ABOUT THE AUTHOR

...view details