ಕರ್ನಾಟಕ

karnataka

ETV Bharat / state

ಗುಟ್ಕಾ ಡೆಲಿವರಿ ಮಾಡುತ್ತಿದ್ದವನಿಗೆ ಚಾಕು ಇರಿದು 25 ಲಕ್ಷ ಹಣ ದೋಚಿದ ಖದೀಮರು! - undefined

ಹಿರಿಯೂರು ನಗರದ ಲೈಬ್ರರಿ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಲಿಸಾಬ್ ಎಂಬುವರಿಗೆ ಚಾಕುವಿನಿಂದ ಇರಿದು ಹಣ ದೋಚಿ ಬೈಕ್​ನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಕಳ್ಳರು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಾಕುವಿನಿಂದ ಇರಿದು 25 ಲಕ್ಷ ಹಣ ದೋಚಿದ ಖದೀಮರು

By

Published : Jun 4, 2019, 2:40 PM IST

ಚಿತ್ರದುರ್ಗ: ಗುಡ್ಕಾ ಡೆಲಿವರಿ ಮಾಡುತ್ತಿದ್ದವನಿಗೆ ಚಾಕುವಿನಿಂದ ಇರಿದು 25 ಲಕ್ಷ ಹಣ ದೋಚಿ ಖದೀಮರು ಪರಾರಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಲೈಬ್ರರಿ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಲಿಸಾಬ್ ಎಂಬುವರಿಗೆ ಚಾಕುವಿನಿಂದ ಇರಿದು ಹಣ ದೋಚಿ ಬೈಕ್​ನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಹಿರಿಯೂರು ಸೇರಿದಂತೆ ಬೇರೆ ತಾಲೂಕು ಕೇಂದ್ರಗಳಿಗೆ ಗುಟ್ಕಾ ಡೆಲಿವರಿ ಮಾಡುತ್ತಿದ್ದ ವಾಲಿಸಾಬ್​ನನ್ನು ಗುರಿಯಾಗಿಸಿಕೊಂಡ ಖದೀಮರು ತಡರಾತ್ರಿ 25 ಲಕ್ಷ ದೋಚಿ ಪಲ್ಸರ್ ಬೈಕ್​​ನಲ್ಲಿ ಎಸ್ಕೇಪ್ ಆದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿ

ಗುಟ್ಕಾ ವ್ಯಾಪಾರಿ ವಾಲಿಸಾಬ್​ಗೆ ತೀವ್ರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಳೆದ ದಿನ ವಲಿಸಾಬ್ ಹೊಸದುರ್ಗದಿಂದ ಆಗಮಿಸಿ ಹಿರಿಯೂರು ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಿಂದ ಆಟೋ ಹತ್ತಿದ ಕ್ಷಣದಿಂದ ಹಿಂಬಾಲಿಸಿದ ಮೂರು ಜನ ಖದೀಮರು, ಮನೆಯ ಬಳಿ‌ ಆಟೋ ಇಳಿಯುವ ವೇಳೆ ಚಾಕುವಿನಿಂದ ಇರಿದು ಹಣ ಲಪಟಾಯಿಸಿದ್ದಾರೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹಿರಿಯೂರು ನಗರ ಪಿಎಸ್ಐ ಮಂಜುನಾಥ್ ಮತ್ತು ಪೊಲೀಸರು ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

For All Latest Updates

TAGGED:

ABOUT THE AUTHOR

...view details